ಕಾಸರಗೋಡು: ಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರು ನಾಪತ್ತೆ
ಸಾಂದರ್ಭಿಕ ಚಿತ್ರ
ಕಾಸರಗೋಡು : ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ಬುಧವಾರ ಸಂಜೆ ನಡೆದಿದೆ.
ತಿರುವನಂತಪುರದ ರಂಜು (24) ಮತ್ತು ಕೊಲ್ಲಂ ನ ವಿಜಿತ್ (23) ಹೊಳೆಯಲ್ಲಿ ಮುಳುಗಿ ನಾಪತ್ತೆಯಾದವರು ಎಂದು ತಿಳಿದುಬಂದಿದೆ.
ಸ್ನೇಹಿತರ ಜೊತೆ ಹೊಳೆಯಲ್ಲಿ ಈಜುತ್ತಿದ್ದಾಗ ಈ ದುರಂತ ನಡೆದಿದೆ. ಪ್ರವಾಸಕ್ಕೆಂದು ಬಂದ ತಂಡವು ಸಂಜೆ 4 ಗಂಟೆ ಸುಮಾರಿಗೆ ಪಯಸ್ವಿನಿ ಹೊಳೆಯ ಆಲೂರು ಎಂಬಲ್ಲಿ ಸ್ನಾನಕ್ಕಿಳಿದ ಸಂದರ್ಭ ಈ ಘಟನೆ ನಡೆಸಿದೆ.
ಅಗ್ನಿ ಶಾಮಕ ದಳ, ಪೊಲೀಸರು ಹಾಗೂ ನಾಗರಿಕರು ಶೋಧ ನಡೆಸುತ್ತಿದ್ದಾರೆ.
Next Story