ಬಂಟ್ವಾಳ: ಶಾಲಾ ಬಾಲಕಿ ನಾಪತ್ತೆ, ದೂರು ದಾಖಲು
ಬಂಟ್ವಾಳ, ನ.3: ಶಾಲಾ ಬಾಲಕಿಯೋರ್ವಳು ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹುರುಡಿ ಗ್ರಾಮದ ನಿವಾಸಿಪುಟ್ಟರಾಜ್ ಎಂಬವರ ಮಗಳು ಕಲ್ಲಡ್ಕದ ಅಮ್ಟೂರಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿರುವ ಪೃಥ್ವಿ (12) ಕಾಣೆಯಾದ ಬಾಲಕಿ.
ಪುಟ್ಟರಾಜ್ ಅವರ ಮಗಳು ಪೃಥ್ವಿಯನ್ನು ವಿದ್ಯಾಭ್ಯಾಸದ ಸಲುವಾಗಿ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಗೆ ಸೇರಿಸಿದ್ದರು. ಕಲ್ಲಡ್ಕದ ಅಮ್ಟೂರು ನಿವಾಸಿ ಸಂಬಂಧಿಕ ರಾಜಪ್ಪ ಅವರ ಮನೆಯಲ್ಲಿ ಬಾಲಕಿ ವಾಸವಾಗಿದ್ದು ಅಲ್ಲಿಂದ ಶಾಲೆಗೆ ಹೋಗಿ ಬರುತ್ತಿದ್ದಳು.
ಬುಧವಾರ ಕೂಡ ಮನೆಯಿಂದ ರಿಕ್ಷಾದಲ್ಲಿ ಶಾಲೆಗೆ ಹೋಗಿದ್ದಳು. ಆದರೆ ಬಾಲಕಿ ಶಾಲೆಗೆ ಬಾರದೆ ಇದ್ದುದರಿಂದ ಶಾಲಾ ಶಿಕ್ಷಕಿ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದಾರೆ.
ಶಾಲೆಗೆಂದು ಹೋದವಳು ಶಾಲೆಗೆ ಹೋಗದೆ ಕಾಣೆಯಾದ ಬಗ್ಗೆ ಗಾಬರಿಗೊಂಡ ಪೋಷಕರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Next Story