ಮೂಡಬಿದಿರೆ: ಎಎಫ್ಎಂಸಿಗೆ ಎಕ್ಸಲೆಂಟ್ ವಿದ್ಯಾರ್ಥಿ ರಾಜೇಶ್ ಆಯ್ಕೆ
ಮೂಡಬಿದಿರೆ: ಇಲ್ಲಿನ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿ ರಾಜೇಶ್ ಪರಶ್ರಾಮ್ ಮಾದವಲ್ಕರ್ ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ 685 ಅಂಕ ಪಡೆಯುವ ಮೂಲಕ ಅತ್ಯುತ್ತಮ ಸಾಧನೆಯೊಂದಿಗೆ ಪುಣೆಯಲ್ಲಿರುವ ದೇಶದ ಪ್ರತಿಷ್ಠಿತ ಆರ್ಮ್ಡ್ ಪೊಲೀಸ್ ವೈದ್ಯಕೀಯ ಕಾಲೇಜಿಗೆ ರಾಷ್ಟ್ರಮಟ್ಟದಲ್ಲಿ 61ನೇ ಸ್ಥಾನದೊಂದಿಗೆಪ್ರವೇಶ ಪಡೆದಿರುತ್ತಾರೆ.
ಸೈನ್ಯದಲ್ಲಿ ಲೆಫ್ಟಿನೆಂಟ್ ಶ್ರೇಣಿಗೆ ಅರ್ಹತೆ ಪಡೆದಿರುವ ರಾಜೇಶ್ ಗೆ, ಸಂಸ್ಥೆಯ ಅಧ್ಯಕ್ಷ ಯುವರಾಜ, ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಪ್ರಾಂಶುಪಾರಾದ ಪ್ರದೀಪ್ ಕುಮಾರ್ ಶೆಟ್ಟಿ, ನೀಟ್ ಸಂಯೋಜಕರಾದ ಪ್ರಶಾಂತ್ ಹೆಗಡೆ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದೆ ಎಂದು ಪ್ರಕಟನೆ ತಿಳಿಸಿದೆ.
Next Story