ನಿತಿನ್ ಎ.ಚೊಳ್ವೇಕರ್ ಗೆ ಪಿ.ಎಚ್.ಡಿ ಪದವಿ
ಮಂಗಳೂರು: ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜ ಕಾರ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಿತಿನ್ ಎ. ಚೊಳ್ವೇಕರ್ ಅವರಿಗೆ ದಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿ ಪ್ರದಾನ ಮಾಡಿದೆ.
ಇವರು ದಾರವಾಡದ ಕಾರ್ನಾಟಕ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ವಿನೀತ ಬಿ. ಪೈ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಎ ಸ್ಟಡಿ ಆನ್ ದಿ ಕೊರಿಲೇಶನ್ ಬಿಟ್ವೀನ್ ಲಿವಿಂಗ್ ಅರೆಂಜ್ಮೆಂಟ್ಸ್ ಆಫ್ ಎಲ್ಡರ್ಲಿ ಆಂಡ್ ದೇರ್ ಡಿಸಿಜನ್ ಮೆಕಿಂಗ್, ಅಡ್ಜಸ್ಟ್ಮೆಂಟ್ ಆಂಡ್ ಲೈಫ್ ಸ್ಯಾಟಿಸ್ ಫ್ಯಾಕ್ಷನ್ ಎಂಬ ಪ್ರಬಂಧಕ್ಕೆ ಪಿಎಚ್ಡಿ ಪದವಿ ಪ್ರದಾನ ಮಾಡಿದೆ.
ಇವರು ಶಿರಸಿಯ ವೀರಭದ್ರಗಲ್ಲಿಯ ನಿವಾಸಿಯಾದ ಅರವಿಂದ್ ಮತ್ತು ಲತಾ ಅವರ ಪುತ್ರ.
Next Story