ಮಂಗಳೂರು: ಇನ್ಸ್ಪೈರ್ ಕೋಚಿಂಗ್ ಇನ್ಸ್ಟಿಟ್ಯೂಟ್ ವಾರ್ಷಿಕೋತ್ಸವ
ಮಂಗಳೂರು: ಇನ್ಸ್ಪೈರ್ ಕೋಚಿಂಗ್ ಇನ್ಸ್ಟಿಟ್ಯೂಟ್ ಇದರ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಪಂಪ್ವೆಲ್ನ ಗೋಲ್ಡ್ ಪ್ಯಾಲೇಸ್ ಪಾರ್ಟಿ ಹಾಲ್ನಲ್ಲಿ ನಡೆಯಿತು.
ಮಂಗಳೂರು ಮಾರ್ಕೆಟಿಂಗ್ ಪ್ರೊಪ್ರಿಯೇಟರ್ ಬಿ. ಬಶೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ಸ್ಥಾಪಕ ಮುಹಮ್ಮದ್ ಇಸ್ತಿಖಾರ್ ಎಂ. ಕೆ.ಸಿ.ರೋಡ್ ವಾರ್ಷಿಕ ವರದಿಯನ್ನು ವಾಚಿಸಿ ಸಂಸ್ಥೆಯ ಅಭಿವೃದ್ಧಿ ಬಗ್ಗೆ ವಿವರಿಸಿದರು.
ಕೆ.ಜಿ.ಎನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಫಾರೂಖ್ ಡಿ,
ಅಲ್ ಬುಶ್ರಾ ಟ್ರಾವೆಲ್ಸ್ನ ಮುಹಮ್ಮದ್ ಸಿದ್ದೀಖ್ ಮತ್ತಿತರರು ಭಾಗವಹಿಸಿದ್ದರು.
Next Story