ಮಂಗಳೂರು: ಡಿ.6ರಿಂದ MEIF "ಟ್ಯಾಲೆಂಟ್ ಹಂಟ್ 2022-23"
ಮಂಗಳೂರು: ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (MEIF) ದ.ಕ ಮತ್ತು ಉಡುಪಿ ಜಿಲ್ಲೆ ಇದರ 20ನೇ ವಾರ್ಷಿಕೋತ್ಸವದ ಅಂಗವಾಗಿ ಉಭಯ ಜಿಲ್ಲೆಗಳ 135 MEIF ಶಾಲೆಗಳ 7, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ "ಟ್ಯಾಲೆಂಟ್ ಹಂಟ್ 2022-23" ವಿವಿಧ ಪ್ರತಿಭಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಗಳು 5 ವಲಯ ಮಟ್ಟದಲ್ಲಿ ನಡೆಯಲಿದ್ದು, ವಿಜೇತರು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಡಿಸೆಂಬರ್ 6ರಿಂದ 31ರ ಒಳಗಾಗಿ ವಲಯ ಮಟ್ಟದ ಸ್ಪರ್ಧೆಗಳು ಜರುಗಲಿದ್ದು, ಈಗಾಗಲೇ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಉಡುಪಿ ವಲಯ ಸ್ಪರ್ಧೆಯು ಡಿ.6ರಂದು MET ಆಂಗ್ಲ ಮಾಧ್ಯಮ ಶಾಲೆ ಉದ್ಯಾವರ, ಬಂಟ್ವಾಳ ಹಾಗೂ ಬೆಳ್ತಂಗಡಿ ಝೋನಲ್ ಸ್ಪರ್ಧೆಯು ಡಿ.10ರಂದು GEM ಪಬ್ಲಿಕ್ ಸ್ಕೂಲ್ ಗೊಳ್ತಮಜಲ್ , ಸುರತ್ಕಲ್ ವಲಯ ಸ್ಪರ್ಧೆಯು ಡಿ.17ರಂದು ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಕೃಷ್ಣಾಪುರ, ಪುತ್ತೂರು, ಕಡಬ ಹಾಗೂ ಸುಳ್ಯ ವಲಯ ಸ್ಪರ್ಧೆಯು ಡಿ.24ರಂದು ಆಯಿಶಾ ಮಹಿಳಾ ಶಾಲೆ ರಾಮಕುಂಜ, ಆತೂರು, ಮಂಗಳೂರು ನಗರ ವಲಯ ಸ್ಪರ್ಧೆಯು ಡಿ.31ರಂದು ಯೆನೆಪೋಯ ಮೊಂಟೆಸ್ಸರಿ ಶಾಲೆ ಜೆಪ್ಪಿನ ಮೊಗರಿನಲ್ಲಿ ನಡೆಯಲಿದೆ. ಸ್ಪರ್ಧಾ ನಿಯಮಾವಳಿಗಳು ಹಾಗೂ ಇತರ ವಿವರಗಳನ್ನು ಶಾಲಾ ಮುಖ್ಯಸ್ಥರಿಗೆ ಕಳುಹಿಸಿಕೊಡಲಾಗುತ್ತಿದೆ. ಎಂದು MEIF ಪ್ರಕಟನೆ ತಿಳಿಸಿದೆ.