ರೈಲ್ವೆ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ
ಮಂಗಳೂರು, ಸೆ. 20: ಯುವಕನೋರ್ವನ ಮೃತದೇಹವೊಂದು ಇಂದು ಬೆಳಗ್ಗೆ ನಗರದ ಮಾರ್ಗನ್ಗೇಟ್ ಮಹಾಕಾಳಿಪಡ್ಪು ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಮೃತ ಯುವಕನನ್ನು ನಾಗುರಿಯ ನಿವಾಸಿ ವೆಲೇರಿಯನ್ ಎಂಬವರ ಪುತ್ರ ವಿಕ್ಟರ್ ಜಾಕ್ಸನ್ ಡಿಕುನ್ಹಾ (23) ಎಂದು ಗುರುತಿಸಲಾಗಿದೆ. ಇವರು ಕಂಕನಾಡಿಯ ಫಾದರ್ಮುಲ್ಲರ್ ಸಂಸ್ಥೆಯಲ್ಲಿ ಫೈರ್ ಆ್ಯಂಡ್ ಸೇಫ್ಟಿ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದರೆಂದು ಹೇಳಲಾಗಿದೆ.
ಜಾಕ್ಸನ್ ಸೋಮವಾರ ರಾತ್ರಿ ಕೆಲಸಕ್ಕೆಂದು ಮನೆಯಿಂದ ತೆರಳಿದ್ದರೆನ್ನಲಾಗಿದೆ. ಇಂದು ಬೆಳಗ್ಗೆ ಅವರ ಮೃತದೇಹವು ಮಹಾಕಾಳಿಪಡ್ಪು ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಈತ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ರೈಲ್ವೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story