ಪುತ್ತೂರಿನಲ್ಲಿ ‘ವಿವೇಕ ಉದ್ಯೋಗ ಮೇಳ’
ಡಿ.3ರಂದು ಕಚೇರಿ ಉದ್ಘಾಟನೆ
ಪುತ್ತೂರು, ನ.29 : ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಇದೇ ಪ್ರಥಮ ಬಾರಿಗೆ ನೆಹರು ನಗರದಲ್ಲಿರುವ ತಮ್ಮ ಸಂಸ್ಥೆಯ ಕ್ಯಾಂಪಸ್ನಲ್ಲಿ ವಿವೇಕ ಉದ್ಯೋಗ ಮೇಳ- 2017 ಆಯೋಜಿಸಿದೆ.
ಈ ಉದ್ಯೋಗ ಮೇಳದಲ್ಲಿ 100ಕ್ಕೂ ಅಧಿಕ ಪ್ರತಿಷ್ಠಿತ ಉದ್ಯೋಗ ಸಂಸ್ಥೆಗಳು ಭಾಗವಹಿಸಲಿವೆ. ಉದ್ಯೋಗಾಕಾಂಕ್ಷಿಗಳ ನೋಂದಣಿ ಕಛೇರಿಯು ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ತೆಂಕಿಲದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಡಿ. 3ರಂದು ಅಪರಾಹ್ನ 2.30 ಕ್ಕೆ ಉದ್ಘಾಟನೆಗೊಳ್ಳುವುದು.
ಉದ್ಯೋಗಾಕಾಂಕ್ಷಿಗಳು ತಮ್ಮ ಸೂಕ್ತ ದಾಖಲೆ ಪತ್ರಗಳೊಂದಿಗೆ ಅಂದು ಶಾಲಾ ಆವರಣದಲ್ಲಿ ಉಪಸ್ಥಿತರಿರಬೇಕಾಗಿ ಉದ್ಯೋಗ ಮೇಳದ ಸಂಘಟಕರು ತಿಳಿಸಿದ್ದಾರೆ. ಉದ್ಯೋಗ ಮೇಳವನ್ನು ಯಶಸ್ವಿಯಾಗಿ ನಡೆಸುವ ಕುರಿತು ಪೂರ್ವ ಸಿದ್ದತಾ ಸಭೆಯು ಸೋಮವಾರ ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದಿದೆ.
Next Story