ಮಂಗಳೂರು: ಶೇ.36.22, ಬಂಟ್ವಾಳ: ಶೇ.44.85 ಮತದಾನ
ಎಪಿಎಂಸಿ ಚುನಾವಣೆ
ಮಂಗಳೂರು, ಜ.12: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಮಂಗಳೂರು ತಾಲೂಕಿನಲ್ಲಿ ಶೇ.36.22 ಹಾಗೂ ಬಂಟ್ವಾಳ ತಾಲೂಕಿನಲ್ಲಿ ಶೇ.44.85ರಷ್ಟು ಮತದಾನವಾಗಿದೆ.
ಮಂಗಳೂರು ತಾಲೂಕಿನಲ್ಲಿ ಒಟ್ಟು 14 ಕ್ಷೇತ್ರಗಳಿಗೆ 32,968 ಮತದಾರರಿದ್ದು, ಈ ಪೈಕಿ 11,942 ಮಂದಿ ಮತ ಚಲಾಯಿಸಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಒಟ್ಟು 14 ಕ್ಷೇತ್ರಗಳಿಗೆ 50,167 ಮತದಾರರಿದ್ದು, ಈ ಪೈಕಿ 22,497 ಮಂದಿ ಮತ ಚಲಾಯಿಸಿದ್ದಾರೆ. ಮತಗಳ ಎಣಿಕೆ ಜ.14ರಂದು ನಡೆಯಲಿದೆ.
Next Story