ಫೆ.26: ವಾರ್ಷಿಕ ಮಹಾಸಭೆೆ
ಕಾರ್ಕಳ, ಫೆ.14: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಕಳ ಶಾಖೆಯ 2016ನೆ ಸಾಲಿನ ವಾರ್ಷಿಕ ಮಹಾಸಭೆೆಯು ಸಂಘದ ಸಭಾಭವನದಲ್ಲಿ ಫೆ.26ರಂದು ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ. 2016ರ ಮಾ.1ರಿಂದ 2017ರ ಜ.1ರ ಅವಧಿಯಲ್ಲಿ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ನೌಕರರಿಗೆ ಸನ್ಮಾನ, 2015-16ನೆ ಸಾಲಿನಲ್ಲಿ ಎಸೆಸೆಲ್ಸಿ, ಪಿಯುಸಿ ಹಾಗೂ ಅಂತಿಮ ಪದವಿಯಲ್ಲಿ ಗರಿಷ್ಠ ಅಂಕಗಳಿಸಿದ ಸರಕಾರಿ ನೌಕರರ ಮಕ್ಕಳಿಗೆ ನಗದು ಬಹುಮಾನ ಸಹಿತ ಸನ್ಮಾನ ನಡೆಯಲಿದೆ. ಅಂಕಪಟ್ಟಿಯ ಪ್ರತಿ ಹಾಗೂ ನಿವೃತ್ತರ ವಿವರ ಗಳನ್ನು ಕಾರ್ಯದರ್ಶಿ ವಸಂತ ಎಂ. (ಮೊ.ಸಂ. 9449166492/8073071620) ಅವರಿಗೆ ಫೆೆ.22 ರೊಳಗೆ ತಲುಪಿಸಬೇಕು ಎಂದು ಪ್ರಕಟನೆ ತಿಳಿಸಿದೆ.
Next Story