ರೆಡ್ಲ್ಯಾಂಡ್ ಫಯರ್ ಆ್ಯಂಡ್ ಸೇಫ್ಟಿ ಟೆಕ್ನಾಲಜಿ ಶುಭಾರಂಭ,
ಮಂಗಳೂರು, ಫೆ.9: ರೆಡ್ಲ್ಯಾಂಡ್ ಫಯರ್ ಆ್ಯಂಡ್ ಸೇಫ್ಟಿ ಟೆಕ್ನಾಲಜಿ ಸಂಸ್ಥೆಯು ಕಂಕನಾಡಿಯ ಶಾಲಿಮಾರ್ ಕಾಂಪ್ಲೆಕ್ಸ್ನ ಎರಡನೆ ಮಹಡಿನಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿತು.
ಕಂಕನಾಡಿ ಜುಮಾ ಮಸೀದಿಯ ಇಸ್ಮಾಯೀಲ್ ಮುಸ್ಲಿಯಾರ್ ಮಿತ್ತೂರು ದುಆದೊಂದಿಗೆ ಸಂಸ್ಥೆ ಉದ್ಘಾಟನೆಗೊಂಡಿತು. ಈ ವೇಳೆ ಮಸ್ಜಿದುನ್ನೂರ್ ಇಮಾಮ್ ಯೂಸುಫ್ ಮೌಲವಿ ಉಪಸ್ಥಿತರಿದ್ದರು.
ಬಳಿಕ ಮುಡಾ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮೌಲಾನ ಅಬ್ದುರ್ರಹೀಂ ಖಾಝ್ಮಿ ಮಾತನಾಡಿ ಶುಭ ಹಾರೈಸಿದರು. ಮುಖ್ಯ ಅಥಿತಿಗಳಾಗಿ ಇಮ್ರಾನ್ ಈಸ್ಟರ್ನ್ ಅರಬಿಯ ಅಲ್ ಖೋಬರ್, ಬುನಯ್ಯ ಎರ್ಮಾಲ್, ಅಲಿ, ಅಬ್ದುಲ್ ಅಝೀಝ್ ತುಂಬೆ ಉಪಸ್ಥಿತರಿದ್ದರು.
ಹಾಫಿಝ್ ಖಾಲಿದ್ ಕಿರಾಅಅತ್ ಪಠಿಸಿದರು. ಅಬ್ದುಲ್ಲಾ ಇಬ್ರಾಹೀಂ ತುಂಬೆ ಅನುವಾದಿಸಿದರು.ಇಬ್ರಾಹೀಂ ತುಂಬೆ ಸಂಸ್ಥೆಯ ಕಿರು ಪರಿಚಯ ನೀಡಿದರು.
ಹಾಜಿ ಹಂಝ ಮಿತ್ತೂರು ಮತ್ತು ಇಬ್ರಾಹೀಂ ತುಂಬೆ ಕಾರ್ಯಕ್ರಮ ನಿರೂಪಿಸಿದರು.
Next Story