ಇಂದು ಸುಳ್ಯ ಎಪಿಎಂಸಿ ಚುನಾವಣೆ
ಸುಳ್ಯ, ಎ.24: ಸುಳ್ಯ ಕೃಷಿ ಉತ್ಪನ್ನ ತಾಲೂಕು ಮಾರುಕಟ್ಟೆ (ಎಪಿಎಂಸಿ) ಚುನಾವಣೆಯ 11 ಕ್ಷೇತ್ರಗಳಿಗೆ ಎ.25ರಂದು ಬೆಳಗ್ಗೆ 8ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ.
ಸೋಮವಾರ ತಾಲೂಕು ಕಚೇರಿಯಲ್ಲಿ ಮತಗಟ್ಟೆ ಮತ್ತು ಭದ್ರತಾ ಸಿಬ್ಬಂದಿಗೆ ಮಸ್ಟರಿಂಗ್ ಕಾರ್ಯ ಜರಗಿತು.
ಒಟ್ಟು 32 ಮತಗಟ್ಟೆಗಳಲ್ಲಿ ತಾಲೂಕಿನ ಒಟ್ಟು 23,295 ಪುರುಷರು, 11,293 ಮಹಿಳೆಯರ ಸಹಿತ ಒಟ್ಟು 34,588 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸುವರು.
13 ಸೂಕ್ಷ್ಮ, 11 ಅತೀ ಸೂಕ್ಷ್ಮ ಹಾಗೂ 8 ಸಾಮಾನ್ಯ ಮತಗಟ್ಟೆ ಕೇಂದ್ರಗಳೆಂದು ಗುರುತಿಸಲಾಗಿದೆ. ಪ್ರತೀ ಮತಗಟ್ಟೆ ಕೇಂದ್ರಗಳಲ್ಲಿ ಮತಗಟ್ಟೆ ಅಧಿಕಾರಿ, ಓರ್ವ ಡಿ ಗ್ರೂಪ್ ನೌಕರ ಸಹಿತ ತಲಾ 5 ಮಂದಿ ಚುನಾವಣಾ ಸಿಬ್ಬಂದಿ ಮತ್ತು ಭದ್ರತೆಗಾಗಿ ತಲಾ 2 ಮಂದಿ ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ವರ್ತಕರ ಮತ್ತು ಅಮರಮುಡ್ನೂರು ಕ್ಷೇತ್ರಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ಹೀಗಾಗಿ ಉಳಿದ 11 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಎ.27ಕ್ಕೆ ಎಪಿಎಂಸಿ ಕಚೇರಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
Next Story