ಮಂಗಳೂರು : ಕೋಟಿಮುರದಲ್ಲಿ ಸಮುದಾಯ ಭವನ ಉದ್ಫಾಟನೆ
ಮಂಗಳೂರು, ಫೆ.15:2012-13ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯ ಕ್ರೋಡೀಕೃತ ಅನುದಾನದಿಂದ ಕುಲಶೇಖರದ ಕೋಟಿಮುರದಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸಮುದಾಯ ಭವನವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೋರವರು ಇತ್ತೀಚೆಗೆ ಉದ್ಫಾಟಿಸಿದರು.
ಈ ಸಂದರ್ಭದಲ್ಲಿ ಮನಪಾ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ಮನಪಾ ಸದಸ್ಯ ಭಾಸ್ಕರ್ ಕೆ, ಗುತ್ತಿಗೆದಾರ ನೆಲ್ಸನ್ ಮೊಂತೆರೋ, ಯುವಕಾಂಗ್ರೆಸ್ ಉಪಾಧ್ಯಕ್ಷ ರಮಾನಂದ ಪೂಜಾರಿ, ರಾಮ ,ವಿಶ್ವನಾಥ್, ವಾಲ್ಟರ್ ಡಿ.ಕುನ್ಹ, ಆಲ್ವಿನ್ ರೇಗೋ, ಆಲ್ವಿನ್ ಪಾಯಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸತೀಶ್ ನಿರೂಪಿಸಿದರು.
Next Story