ಮೇ 22: ಖಾಸಗಿ ವೈದ್ಯಕೀಯ ಸೇವೆ ಸ್ಥಗಿತ
ಮೂಡುಬಿದಿರೆ, ಮೇ 19: ಮಂಗಳೂರಿನಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ಮೂಡುಬಿದಿರೆ ಡಾಕ್ಟರ್ಸ್ ಅಸೋಸಿಯೇಶನ್ ವತಿಯಿಂದ ಮೇ 22ರಂದು ಖಾಸಗಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಿರುವುದಾಗಿ ಅಧ್ಯಕ್ಷ ಡಾ.ಆಶೀರ್ವಾದ್ ತಿಳಿಸಿದ್ದಾರೆ.
ಅಂದು ಪೂರ್ವಾಹ್ನ 6ರಿಂದ ರಾತ್ರಿ 12ರವರೆಗೆ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲು ಸಂಘದ ಸಭೆಯಲ್ಲಿ ನಿರ್ಧರಿಸಿರುವುದಾಗಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಆದರೆ ತುರ್ತು ಸೇವೆಗಳನ್ನು ಒದಗಿಸಲು ಬದ್ಧವಾಗಿರುವುದಾಗಿಯೂ ತಿಳಿಸಿದ್ದಾರೆ.
ಮೂಡುಬಿದಿರೆ, ಶಿರ್ತಾಡಿ, ನಾರಾವಿ, ಸಿದ್ಧಕಟ್ಟೆ, ಕಟೀಲು, ಕೈಕಂಬ, ಎಡಪದವು, ಕಿನ್ನಿಗೋಳಿ,ವೇಣೂರು, ಬೆಳುವಾಯಿ ಪ್ರದೇಶಗಳ ವೈದ್ಯಕೀಯ ಆಸ್ಪತ್ರೆ ಹಾಗೂ ಕ್ಲಿನಿಕ್ಗಳಲ್ಲಿ ಅಂದು ಸೇವೆ ಸ್ಥಗಿತಗೊಳಿಸಲಾಗುವುದು ಎಂದವರು ತಿಳಿಸಿದ್ದಾರೆ.
Next Story