ಡಾ.ಮೋಹನ್ ಆಳ್ವರಿಗೆ ಅಭಿನಂದನೆ
ಶಿರ್ವ, ಜೂ.2: ಶಿಕ್ಷಣ, ಆರೋಗ್ಯ, ಕಲೆ, ಸಾಹಿತ್ಯ, ಕ್ರೀಡೆ ಹಾಗೂ ಇತರ ಕ್ಷೇತ್ರಗಳಿಗೆ ಅಪಾರ ಹಾಗೂ ವಿಶಿಷ್ಟ ಕೊಡುಗೆ ನೀಡುತ್ತಿರುವ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರನ್ನು 65ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಂಗಳೂರು ವಿವಿ ವ್ಯಾಪ್ತಿಯ ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಸಂಘದ ಪರವಾಗಿ ಮೂಡಬಿದ್ರೆಯ ದಳ ಕಾಲೇಜಿನಲ್ಲಿ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಡಾ.ಎಚ್. ಶಾಂತರಾಮ್, ಕೋಶಾಧಿಕಾರಿ ಸಿ.ಎ. ಎಸ್.ಎಸ್. ಕಾಮತ್, ಕಾರ್ಯದರ್ಶಿ ಪ್ರೊ. ವೈ. ಭಾಸ್ಕರ ಶೆಟ್ಟಿ ಶಿರ್ವ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಯಶೋವರ್ಮ, ದವಳ ಕಾಲೇಜಿನ ಕಾರ್ಯದರ್ಶಿ ಎಂ. ಅಭಿಜಿತ್, ಪ್ರಾಂಶುಪಾಲ ಪ್ರೊ. ರವೀಶ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
Next Story