ಕೊಳ್ಳೇಗಾಲ: ವಾಹನ ಢಿಕ್ಕಿ; 7 ಮಂದಿಗೆ ಗಂಭೀರ ಗಾಯ
ಕೊಳ್ಳೇಗಾಲ,ಜ.4: ಪಟ್ಟಣದ ಬೆಂಗಳೂರು ರಸ್ತೆಯಲ್ಲಿರುವ ಬಸವೇಶ್ವರ ಅಕ್ಕಿ ಮಿಲ್ನ ಬಳಿ ಗುರುವಾರ ಟಾಟಾ ಎಸಿ ಆಟೊಗೆ ರೋಡ್ ರೋಲಾರ್ ಢಿಕ್ಕಿ ಹೊಡೆದು 7 ಮಂದಿಗೆ ಗಂಭೀರ ಗಾಯಾಗಳಾಗಿದೆ.
ತಾಲ್ಲೂಕಿನ ಚಿಕ್ಕಲ್ಲೂರು ಜಾತ್ರೆಯನ್ನು ಮುಗಿಸಿ ಹಿಂದಿರುಗಿ ಬರುವ ಸಂದರ್ಭದಲ್ಲಿ ಟಾಟಾ ಎಸಿ ಆಟೋ ನಿಂತಿರುವ ರೋಡ್ ರೋಲಾರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸಿದ್ದಪ್ಪ, ಕಾರ್ತಿಕ್, ಲಕ್ಷೀದೇವಿ, ಚಿಕ್ಕತಾಯಮ್ಮ, ಕುಮಾರ್, ರಾಜು, ಮಂಜು ಗಾಯಾಗೊಂಡಿದ್ದಾರೆ.
5 ಮಂದಿಯನ್ನು ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಸೇರಿಸಲಾಗಿದ್ದು, 2 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story