ಮೈಸೂರು: ಸ್ಕೂಟರ್ ನಿಂದ ಆಯತಪ್ಪಿ ಬಿದ್ದ ಶಿಕ್ಷಕಿ; ಟ್ರ್ಯಾಕ್ಟರ್ ಹರಿದು ಮೃತ್ಯು
ಮೈಸೂರು,ಜು.10: ಸ್ಕೂಟರ್ ನಲ್ಲಿ ತೆರಳುತ್ತಿದ್ದ ಶಿಕ್ಷಕಿಯೋರ್ವರು ಆಯತಪ್ಪಿ ಬಿದ್ದು, ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮೈಸೂರಿನ ಹಿನಕಲ್ ಸಮೀಪ ನಡೆದಿದೆ.
ಮೃತರನ್ನು ಹಿನಕಲ್ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕಿ ಪುಷ್ಪಾ(55)ಎಂದು ಗುರುತಿಸಲಾಗಿದ್ದು, ಸೋಮವಾರ ಮಧ್ಯಾಹ್ನ ಊಟ ಮಾಡಿಕೊಂಡು ಬರಲೆಂದು ಶಾಲೆಯಿಂದ ಸ್ಕೂಟರ್ ನಲ್ಲಿ ಹೂಟಗಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಆಯತಪ್ಪಿ ಬಿದ್ದಿದ್ದು, ಆ ಸಂದರ್ಭ ಹಿಂದಿನಿಂದ ಬರುತ್ತಿದ್ದ ಟ್ರ್ಯಾಕ್ಟರ್ ನ ಹಿಂಬದಿ ಚಕ್ರ ಪುಷ್ಪಾ ಅವರ ಮೇಲೆ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story