ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.54 ಲಕ್ಷ ನಗದು ಜಪ್ತಿ
ವಿಜಯಪುರ,ಎ.3: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2,54,720 ನಗದನ್ನು ಮುದ್ದೇಬಿಹಾಳ ತಾಲೂಕಿನ ಸಮೀಪದ ನಾರಾಯಣಪುರ ಚೆಕ್ ಪೋಸ್ಟ್ ನಲ್ಲಿ ಜಪ್ತಿ ಮಾಡಲಾಗಿದೆ.
ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುವಾಗ ಪ್ರಸಾದ್ ಪಾಟೀಲ್ ಎಂಬವರ ಹೊಂಡಾಸಿಟಿ ಕಾರನ್ನು ತಡೆದು ಪರಿಶೀಲಿಸಿದ್ದು, ಈ ವೇಳೆ ಕಾರಿನಲ್ಲಿ ಹಣ ಪತ್ತೆಯಾಗಿದೆ. ಸಹಾಯಕ ಚುನಾವಣಾಧಿಕಾರಿ ಎನ್.ರಾಘವೇಂದ್ರ, ತಹಸೀಲ್ದಾರ್ ವಿನಯ್ ಕುಮಾರ್ ಪಾಟೀಲ್ ಹಾಗೂ ಮುದ್ದೇಬಿಹಾಳ ಠಾಣಾ ಸಿಪಿಐ ರವಿಕುಮಾರ ಕಪತ್ತನವರ ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ.
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story