ಬೆಳಗಾವಿಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ವರು ಸಾವು
ಬೆಳಗಾವಿ, ಎ.4: ಭಾರೀ ಮಳೆ ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ಕು ಮಂದಿ ಹಾಗೂ ಎರಡು ಎತ್ತುಗಳು ದಾರುಣವಾಗಿಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಿ. ತಿಮ್ಮಾಪುರ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ,
ರೇವಪ್ಪ ಕಲ್ಲೋಳಿ, ರತ್ನವ್ವ ಕಲ್ಲೋಳಿ, ಸಚಿನ್ ಹಾಗೂ ಕೃಷ್ಣ ಮೃತ ದುರ್ದೈವಿಗಳು,
ಬುಧವಾರ ಸಂಜೆ ಗ್ರಾಮದಲ್ಲಿ ಭಾರೀ ಮಳೆ ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು, ಇಂದು ಬೆಳಗ್ಗೆ ಜಮೀನಿಗೆ ಮೃತರ ಕುಟುಂಬ ತೆರಳಿದ್ದ ನಾಲ್ವರು ಈ ವೇಳೆ ತಂತಿ ತುಳಿದು ಸಾವನ್ನಪ್ಪಿದ್ದಾರೆ.
ವಿದ್ಯುತ್ ತಂತಿ ಸರಿಪಡಿಸುವಂತೆ ಹೆಸ್ಕಾಂಗೆ ದೂರು ನೀಡಲಾಗಿತ್ತು, ಆದರೆ ಜನರ ಮನವಿಗೆ ಹೆಸ್ಕಾಂ ಸ್ಪಂದಿಸಿರಲಿಲ್ಲ. ಎನ್ನಲಾಗಿದೆ. ಈ ಸಂಬಂಧ ಕಟಕೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
Next Story