ನದಿಯಲ್ಲಿ ಇಬ್ಬರು ಅಪರಿಚಿತರ ಮೃತದೇಹ ಪತ್ತೆ
ಮಂಡ್ಯ, ಅ.29: ಮದ್ದೂರು ಬಳಿ ಶಿಂಷಾನದಿಯಲ್ಲಿ ಅಪರಿಚಿತ ಪುರುಷ ಮತ್ತು ಮಹಿಳೆಯ ಶವ ದೊರಕಿದ್ದು, ಇವರು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಪ್ರತ್ಯೇಕ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎಂಬ ಸಂಶಯ ವ್ಯಕ್ತವಾಗಿದೆ.
ಮಂಗಳವಾರ ಬೆಳಗ್ಗೆ ಬೆಂಗಳೂರು ಮೈಸೂರು ಹೆದ್ದಾರಿಯ ಶಿಂಷಾನದಿ ಸೇತುವೆ ಬಳಿ ಈ ಶವಗಳು ಪತ್ತೆಯಾಗಿದ್ದು, ಪೊಲೀಸರು ಶವಗಳನ್ನು ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story