ಕೊರೋನ: ಬೆಳಗಾವಿಯಲ್ಲಿ ವಾರ್ ರೂಮ್ ಆರಂಭ
ಬೆಳಗಾವಿ, ಎ.23: ಕೊರೋನ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳಿಗಾಗಿ ನಗರದಲ್ಲಿ ವಾರ್ರೂಮ್ ಆರಂಭಿಸಲಾಗಿದೆ.
ಗುರುವಾರ ನಗರದ ವಿಶ್ವೇಶ್ವರಯ್ಯ ಸ್ಮಾರ್ಟ್ ಸಿಟಿಯ ಕಮಾಂಡ್ ಅಂಡ್ ಕಂಟ್ರೋಲ್ ಕೇಂದ್ರದಲ್ಲಿ ತೆರೆದಿರುವ ಕೊರೋನ ವಾರ್ರೂಮ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿ, ಅಧಿಕಾರಿಗಳಿಂದ ಇದರ ಕಾರ್ಯವೈಖರಿಗಳ ಕುರಿತು ಮಾಹಿತಿ ಪಡೆದು ಸೂಕ್ತ ಸಲಹೆಗಳನ್ನು ನೀಡಿದರು.
ಕೊರೋನ ಸೋಂಕಿತರ ಸಂಪರ್ಕದಲ್ಲಿರುವವರನ್ನು ಮೊಬೈಲ್ ಮೂಲಕ ಪತ್ತೆ ಮಾಡುವುದು, ಜನರ ಓಡಾಟ ಹಾಗೂ ವಾಹನಗಳ ಸಂಚಾರದ ಮೇಲೆ ವಾರ್ರೂಮ್ ಮೂಲಕ ನಿಗಾ ವಹಿಸಲಾಗುವುದು. ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯ ಮತ್ತು ಅನಿಸಿಕೆಗಳನ್ನು ಸಂಗ್ರಹಿಸಲು ವಾರ್ರೂಮ್ ಬಳಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ನೀಡಿದ್ದಾರೆ.
Next Story