ವಿದ್ಯುತ್ ಸ್ಪರ್ಶದಿಂದ ಆನೆ ಸಾವು
ಕಡೂರು, ಜು.೩೧: ತಾಲ್ಲೂಕಿನ ಎಮ್ಮೆದೊಡ್ಡಿ ಬಳಿ ಆನೆ ಆಹಾರ ಅರಸಿ ರಾತ್ರಿ ವೇಳೆ ಹುಲಿಯಪ್ಪ ಎಂಬವರ ಜಮೀನಿನಲ್ಲಿ ಹಾಕಿದ್ದ ಜೋಳದ ಹೊಲಕ್ಕೆ ನುಗಿದ್ದು ಈ ವೇಳೆ ವಿದ್ಯುತ್ ತಗುಲಿ ಸಾವನ್ನಪ್ಪಿದೆ ಎನ್ನಲಾಗಿದೆ.
ಆನೆ ಸಾವನ್ನಪ್ಪಿದ್ದು ತಿಳಿದು ಜಮೀನಿನ ಮಾಲೀಕ ಹುಲಿಯಪ್ಪ ತಲೆಮರೆಸಿಕೊಂಡಿದ್ದಾರೆ.
ಸುಮಾರು 3 ವರ್ಷದ ಪ್ರಾಯದ ಆನೆ ಮೃತಪಟ್ಟಿದ್ದು, ಕಡೂರು ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕಳೆದ ವರ್ಷವೂ ವಿದ್ಯುತ್ ಸ್ಪರ್ಶದಿಂದ ಇದೇ ವ್ಯಾಪ್ತಿಯಲ್ಲಿ ಗಂಡಾನೆ ಸಾವನ್ನಪ್ಪಿತ್ತು.
Next Story