ಪಾಸ್ಪೋರ್ಟ್ ನಿಯಮ ಉಲ್ಲಂಘನೆ: 10 ಮಂದಿ ಇಂಡೋನೇಷ್ಯಾ ಪ್ರಜೆಗಳಿಗೆ ಕಾರಾಗೃಹ ಶಿಕ್ಷೆ
ಬೆಳಗಾವಿ, ಅ.8: ಪಾಸ್ಪೋರ್ಟ್ ನಿಯಮ ಉಲ್ಲಂಘಿಸಿದ 10 ಮಂದಿ ಇಂಡೋನೇಷ್ಯಾದ ಪ್ರಜೆಗಳಿಗೆ ಬೆಳಗಾವಿಯ 2ನೆ ಜೆಎಂಎಫ್ಸಿ ಕೋರ್ಟ್ ಎರಡು ದಿನ ಕಾರಾಗೃಹ ಶಿಕ್ಷೆ, ತಲಾ 20 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ.
ಇವರು ಭಾರತದ ಪ್ರವಾಸ ಸ್ಥಳಗಳನ್ನು ವೀಕ್ಷಿಸುವುದಾಗಿ ಹೇಳಿ ಪಾಸ್ಪೋರ್ಟ್ ಪಡೆದಿದ್ದರು. ಆದರೆ, ಪ್ರವಾಸಿ ಸ್ಥಳ ವೀಕ್ಷಣೆ ಮಾಡುವ ಬದಲು ಧರ್ಮ ಪ್ರಚಾರದ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಈ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದರು.
ಅಲ್ಲದೆ, ಲಾಕ್ಡೌನ್ ವೇಳೆ ಅಂತರ್ರಾಷ್ಟ್ರೀಯ ವಿಮಾನ ಹಾರಾಟ ಬಂದ್ ಆಗಿದ್ದರಿಂದ ಬೆಳಗಾವಿಯಲ್ಲೇ ಉಳಿದುಕೊಂಡಿದ್ದರು. ಈ ಕುರಿತು ತನಿಖೆ ನಡೆಸಿದ ಮಾಳಮಾರುತಿ ಪೊಲೀಸರು ಇಂಡೋನೇಷ್ಯಾ ಪ್ರಜೆಗಳನ್ನು ವಶಕ್ಕೆ ಪಡೆದಿದ್ದರು. ನ್ಯಾಯಾಲಯವು ಈ ಪ್ರಚಾರಕರಿಗೆ ಕಾರಾಗೃಹ ಶಿಕ್ಷೆ, ದಂಡ ವಿಧಿಸಿ ಆದೇಶಿಸಿದೆ.
Next Story