ಪತ್ನಿಯಿಂದ ಮಾರಣಾಂತಿಕ ಹಲ್ಲೆ: ಪತಿ ಸಾವು, ಅತ್ತೆ, ಮಾವ ಗಂಭೀರ ಗಾಯ
ಮಂಡ್ಯ, ಅ. 21: ಮಹಿಳೆಯೊಬ್ಬಳು ತನ್ನ ಗಂಡ, ಅತ್ತೆ ಹಾಗೂ ಮಾವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಗಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸೊಸೆಯ ಮಾರಣಾಂತಿಕ ಹಲ್ಲೆಯಿಂದ ಗಾಯಗೊಂಡಿರುವ ಅತ್ತೆ ಹಾಗೂ ಮಾವನ ಸ್ಥಿತಿ ಗಂಭೀರವಾಗಿದೆ.
ಮೂರು ದಿನಗಳ ಹಿಂದೆ ನಾಗರಾಜು ಹೆಂಡತಿ ನಾಗಮಣಿ ತನ್ನ ಗಂಡ ಸೇರಿದಂತೆ ಅತ್ತೆ ಹಾಗೂ ಮಾವನ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿ ಗಂಭೀರ ಗಾಯ ಮಾಡಿದ್ದಳು ಎನ್ನಲಾಗಿದ್ದು, ಘಟನೆಯಲ್ಲಿ ಗಂಡ ನಾಗರಾಜು (46) ಅತ್ತೆ ಕುಳ್ಳಮ್ಮ (60)ಮಾವ ವೆಂಕಟೇಗೌಡ (67)ಗಂಭೀರ ಗಾಯಗೊಂಡು ಮೈಸೂರಿನ ಕುವೆಂಪುನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ನಾಗರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾವನ್ನಪ್ಪಿದ್ದು, ಅತ್ತೆ ಮಾವರ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ನಾಗಮಣಿಯನ್ನು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Next Story