ಡ್ರಗ್ಸ್ ದಂಧೆ ಪ್ರಕರಣ: ರಾಗಿಣಿ ಆಪ್ತ ಗಿರೀಶ್ ಗದಿಗೆಪ್ಪಗೌಡಗೆ ಜಾಮೀನು
ಧಾರವಾಡ, ಅ.23: ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತ ಎನ್ನಲಾದ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡಗೆ ಧಾರವಾಡ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ತನ್ನ ಮೇಲೆ ದೂರು ದಾಖಲಾಗದೆ ಇದ್ದರೂ ಸಹ ಗಿರೀಶ್ ಗದಿಗೆಪ್ಪಗೌಡರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸತ್ರ ನ್ಯಾಯಾಲಯ 2 ಲಕ್ಷ ರೂಪಾಯಿ ಶ್ಯೂರಿಟಿ ಜೊತೆಗೆ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
Next Story