ಕೋವಿಡ್19: ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಮುಖ; ಒಟ್ಟು 7 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಕೆ
86 ಸಾವಿರ ಸಕ್ರಿಯ ಪ್ರಕರಣಗಳು
ಬೆಂಗಳೂರು, ಅ.24: ರಾಜ್ಯದಲ್ಲಿ ಶನಿವಾರದಂದು 4,471 ಹೊಸ ಕೊರೋನ ಸೋಂಕು ಪ್ರಕರಣಗಳು ದೃಢವಾಗಿವೆ. 52 ಜನರು ಸೋಂಕಿಗೆ ಬಲಿಯಾಗಿದ್ದು, 7,153 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 7,98,378 ಜನರಿಗೆ ಕೊರೋನ ಸೋಂಕು ತಗುಲಿದ್ದು, 10,873 ಮಂದಿ ಮೃತರಾಗಿದ್ದಾರೆ. ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ.
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 86,749ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. 935 ಜನ ಕೊರೋನ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
52 ಮಂದಿ ಮೃತ್ಯು: ಬಾಗಲಕೋಟೆ 1, ಬಳ್ಳಾರಿ 2, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 26, ಚಾಮರಾಜನಗರ 3, ಚಿತ್ರದುರ್ಗ 1, ದಕ್ಷಿಣ ಕನ್ನಡ 3, ಧಾರವಾಡ 2, ಹಾವೇರಿ 1, ಕಲಬುರಗಿ 1, ಕೋಲಾರ 2, ಮೈಸೂರು 6, ಶಿವಮೊಗ್ಗ 1, ತುಮಕೂರು 1, ವಿಜಯಪುರ ಜಿಲ್ಲೆಯಲ್ಲಿ ಒಬ್ಬರು ಮೃತರಾಗಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 4,471 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 57, ಬಳ್ಳಾರಿ 129, ಬೆಳಗಾವಿ 73, ಬೆಂಗಳೂರು ಗ್ರಾಮಾಂತರ 102, ಬೆಂಗಳೂರು ನಗರ 2,251, ಬೀದರ್ 7, ಚಾಮರಾಜನಗರ 34, ಚಿಕ್ಕಬಳ್ಳಾಪುರ 78, ಚಿಕ್ಕಮಗಳೂರು 85, ಚಿತ್ರದುರ್ಗ 84, ದಕ್ಷಿಣ ಕನ್ನಡ 136, ದಾವಣಗೆರೆ 52, ಧಾರವಾಡ 93, ಗದಗ 14, ಹಾಸನ 136, ಹಾವೇರಿ 30, ಕಲಬುರಗಿ 71, ಕೊಡಗು 33, ಕೋಲಾರ 45, ಕೊಪ್ಪಳ 49, ಮಂಡ್ಯ 163, ಮೈಸೂರು 173, ರಾಯಚೂರು 25, ರಾಮನಗರ 22, ಶಿವಮೊಗ್ಗ 79, ತುಮಕೂರು 232, ಉಡುಪಿ 81, ಉತ್ತರ ಕನ್ನಡ 48, ವಿಜಯಪುರ 62, ಯಾದಗಿರಿ ಜಿಲ್ಲೆಯಲ್ಲಿ 27 ಪ್ರಕರಣಗಳು ಪತ್ತೆಯಾಗಿವೆ.