ಶಿವಮೊಗ್ಗ: 28 ವಿದ್ಯಾರ್ಥಿ, ಸಿಬ್ಬಂದಿಗೆ ಕೊರೋನ ಸೋಂಕು ದೃಢ
ಶಿವಮೊಗ್ಗ: ಕಾಲೇಜು ಬರಲು ಕಡ್ಡಾಯವಾಗಿ ಕೋವಿಡ್ ವರದಿ ತರಬೇಕೆಂಬ ನಿಯಮದಿಂದಾಗಿ ಪರೀಕ್ಷೆಗೆ ಒಳಪಟ್ಟ ವಿದ್ಯಾರ್ಥಿ ಮತ್ತು ಸಿಬ್ಬಂದಿ ಸೇರಿ ಒಟ್ಟು 28 ಜನರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಬುಧವಾರ 354 ವಿದ್ಯಾರ್ಥಿಗಳು ಹಾಗೂ 44 ಸಿಬ್ಬಂದಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಅದೇ ರೀತಿ ಇದುವರೆಗೆ 6750 ವಿದ್ಯಾರ್ಥಿಗಳು ಮತ್ತು 1650 ಸಿಬ್ಬಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 18, ಭದ್ರಾವತಿಯಲ್ಲಿ 8 ಜನರಿಗೆ ಕೊರೋನ ಪಾಟಿಸಿವ್ ಬಂದಿದೆ.
Next Story