ಈ ಬಾರಿ ಜನ್ಮದಿನ ಆಚರಿಸದಿರಲು ಎಚ್ಡಿಕೆ ತೀರ್ಮಾನ: ಕಾರಣ ಏನು ಗೊತ್ತೇ ?
ಬೆಂಗಳೂರು, ಡಿ. 14: ‘ಕೊರೋನ ಸಂಕಷ್ಟವು ರಾಜ್ಯದ ಜನರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಡಿ.16ರಂದು ನನ್ನ ಜನ್ಮದಿನವನ್ನು ಆಚರಿಸದಿರಲು ನಿರ್ಧರಿಸಿದ್ದೇನೆ. ಆ ದಿನ ಬೆಂಗಳೂರಿನಲ್ಲಿ ನಾನು ಲಭ್ಯವಿರುವುದಿಲ್ಲ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ನೀವಿರುವಲ್ಲಿಂದಲೆ ನನ್ನನ್ನು ಹಾರೈಸಿ. ನಿಮ್ಮ ಪ್ರೀತಿ ಅಭಿಮಾನ ದೊಡ್ಡದು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಪ್ರತಿ ಜನ್ಮದಿನಗಳು ನಮ್ಮ ಇರುವಿಕೆಯನ್ನು ನೆನಪಿಸುತ್ತವೆ ನಿಜ. ಆದರೆ ಬದುಕಿದ್ದಷ್ಟು ದಿನ ಕಷ್ಟದಲ್ಲಿರುವ ಜನರ ಒಳಿತಿಗೆ ನಿಸ್ವಾರ್ಥವಾಗಿ, ಕಾರುಣ್ಯಭರಿತವಾಗಿ ದುಡಿದಾಗ ನಮ್ಮ ಹುಟ್ಟು ಸಾರ್ಥಕವಾಗುತ್ತದೆ ಎಂಬುದು ನನ್ನ ನಂಬಿಕೆ ಮತ್ತು ನಡೆ’ ಎಂದು ಇಂದಿಲ್ಲಿ ತಿಳಿಸಿದ್ದಾರೆ
Next Story