ಹಳ್ಳಕ್ಕೆ ಮಗುಚಿ ಬಿದ್ದ ಬೈಕ್: ಇಬ್ಬರು ಸವಾರರು ಸ್ಥಳದಲ್ಲೇ ಮೃತ್ಯು
ಚಾಮರಾಜನಗರ, ಎ.4: ಬೈಕ್ ಹಳ್ಳಕ್ಕೆ ಮಗುಚಿ ಬಿದ್ದು ಮೂವರು ಸವಾರರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಾಯಗೊಂಡಿರುವ ಘಟನೆ ತಾಲೂಕಿನ ಅರಕಲವಾಡಿ ಸಮೀಪದ ಮೂಡಲ ಹೊಸಹಳ್ಳಿ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.
ತಮಿಳುನಾಡು ಮೂಲದ ಕುಮಾರ (45), ಮೂಡಲ ಹೊಸಹಳ್ಳಿ ಗ್ರಾಮದ ಬಸವಯ್ಯ (65) ಮೃತಪಟ್ಟವರು. ಮೂಡಲ ಹೊಸಹಳ್ಳಿಯ ಮಹದೇವಯ್ಯ ಗಾಯಗೊಂಡು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡಿನವರಾದ ಕುಮಾರ್ ಹೊಸಹಳ್ಳಿ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಬಸವಯ್ಯ, ಮಹದೇವಯ್ಯ ಸ್ನೇಹಿತರಾಗಿದ್ದು, ಮೂವರೂ ವಡ್ಡರಹಳ್ಳಿಗೆ ಬೈಕ್ನಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಬೈಕ್ ನಿಯಂತ್ರಣ ತಪ್ಪಿ, ಹಳ್ಳಕ್ಕೆ ಬಿದ್ದಿದೆ. ಬೈಕ್ ಚಾಲನೆ ಮಾಡುತ್ತಿದ್ದ ಕುಮಾರ ಹಾಗೂ ಮಧ್ಯದಲ್ಲಿ ಕುಳಿತಿದ್ದ ಬಸವಯ್ಯ ತೀವ್ರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಮಹದೇವಯ್ಯ ಅವರಿಗೆ ಗಾಯಗಳಾಗಿವೆ.
Next Story