ಕೆ-ಸೆಟ್ ಪರೀಕ್ಷೆ ಮತ್ತೊಮ್ಮೆ ಮುಂದೂಡಿಕೆ
ಬೆಂಗಳೂರು, ಎ.21: ಮೈಸೂರು ವಿಶ್ವವಿದ್ಯಾಲಯವು ಎ.25(ರವಿವಾರ) ನಡೆಸಲು ಉದ್ದೇಶಿಸಿದ್ದ ಕೆ-ಸೆಟ್ ಪರೀಕ್ಷೆ(ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ)ಯನ್ನು ಮುಂದೂಡಲಾಗಿದೆ.
ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲಿಕ್ಕಾಗಿ ರಾಜ್ಯ ಸರಕಾರ ವಾರಾಂತ್ಯದಲ್ಲಿ ಕರ್ಫ್ಯೂ ಘೋಘಿಸಿದೆ. ಈ ಹಿನ್ನೆಲೆಯಲ್ಲಿ ಕೆ-ಸೆಟ್ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಎಲ್ಲ ನೋಂದಾಯಿತ ಅಭ್ಯರ್ಥಿಗಳು ಕೆ-ಸೆಟ್ 2021 ಪರೀಕ್ಷೆಗೆ ಸಂಬಂಧಿಸಿದಂತೆ ಕೆ-ಸೆಟ್ ವೆಬ್ಸೈಟ್ನಲ್ಲಿ ಹೊರಡಿಸುವ ವಿಷಯಗಳನ್ನು ನೋಡಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story