ಶಿವಮೊಗ್ಗ: ಹೆಸರಾಂತ ವೈದ್ಯ ಡಾ.ಈಶ್ವರಪ್ಪ ನಿಧನ
ಶಿವಮೊಗ್ಗ, ಮೇ 21: ಕೊರೋನ ಮಹಾಮಾರಿಯಿಂದ ನಗರದ ಜೈಲ್ ರಸ್ತೆಯ ಶಿವಮೊಗ್ಗ ಗ್ಯಾಸ್ ಎದುರು ಇರುವ ಸಾನಿಧ್ಯ ಕ್ಲಿನಿಕ್ನ ಹೆಸರಾಂತ ವೈದ್ಯರಾದ ಡಾ.ಈಶ್ವರಪ್ಪ (77) ಅವರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ಮೃತರು ಸರ್ಕಾರಿ ವೈದ್ಯರಾಗಿ ವಿವಿಧೆಡೆ ಸೇವೆ ಸಲ್ಲಿಸಿದ್ದರು ಹಾಗೂ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಚಿಕಿತ್ಸೆ ನೀಡಿ ಜನಪ್ರಿಯರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಜನಪ್ರತಿನಿಧಿಗಳು ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story