ಸೈಕಲ್ನಲ್ಲಿ ಸುತ್ತಾಡಿದ ಸಂಸದ ತೇಜಸ್ವಿ ಸೂರ್ಯ: ಮಾಸ್ಕ್ ಎಲ್ಲಿ ಎಂದು ಪ್ರಶ್ನಿಸಿದ ಜನತೆ
ಬೆಂಗಳೂರು, ಜು. 25: ಕೊರೋನ ಸೋಂಕು ನಿಯಂತ್ರಣಕ್ಕೆ ಮಾಸ್ಕ್ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಮಾಸ್ಕ್ ಹಾಕದೆ ಬೆಂಗಳೂರಿನಲ್ಲಿ ಸುತ್ತುತ್ತಿರುವ ಫೋಟೋಗಳು ವೈರಲ್ ಆಗಿವೆ.
ತೇಜಸ್ವಿ ಸೂರ್ಯ ಮಾಸ್ಕ್ ಹಾಕದೆ ಸೈಕಲ್ನಲ್ಲಿ ಬೆಂಗಳೂರು ತುಂಬಾ ಸೈಕಲ್ ಸವಾರಿ ಮಾಡಿದ್ದಾರೆ. ಆ ಫೋಟೋಗಳನ್ನು ತೇಜಸ್ವಿ ಸೂರ್ಯ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಮಾಸ್ಕ್ ಇಲ್ಲದೆ ಹೊರಗೆ ಸುತ್ತುತ್ತಿರುವುದರ ವಿರುದ್ಧ ಜನರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ನೆಟ್ಟಿಗರು ಸಹ ಮಾಸ್ಕ್ ಎಲ್ಲಿ ಎಂದು ಕಮೆಂಟ್ ಮಾಡಿದ್ದಾರೆ.
ಸೂಕ್ಷ್ಮವಾಗಿ ಗಮನಿಸಿದರೆ, ವಿವಿಧ ಪಕ್ಷಗಳ ರಾಜಕೀಯ ನಾಯಕರು ಕೊರೋನ ಮಾರ್ಗಸೂಚಿ ಉಲ್ಲಂಘಿಸಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಕಂಡುಬರುತ್ತಿದೆ. ಜನರ ಹಿತ ಕಾಯಬೇಕಾದ, ಜನರಿಗೆ ತಿಳಿಹೇಳಬೇಕಾದವರೇ ಹೀಗೆ ಬೇಜವಾಬ್ದಾರಿ ತೋರುವುದು ಹಾಗೂ ಅದನ್ನು ಹೆಮ್ಮೆಯಿಂದ ಪ್ರದರ್ಶಿಸುವುದು ವಿಷಾದ ಮೂಡಿಸಿದೆ.
Next Story