ಬೆಂಗಳೂರು: ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 1,817 ಪೊಲೀಸ್ ಸಿಬ್ಬಂದಿ ವರ್ಗಾವಣೆ
ಬೆಂಗಳೂರು, ಆ.5: ಹಲವು ವರ್ಷಗಳಿಂದ ನಗರದಲ್ಲಿ ಒಂದೇ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವರ್ಗಾವಣೆ ಮಾಡಿದ್ದಾರೆ.
ನಗರದ ವಿವಿಧ ಪೊಲೀಸ್ ಠಾಣೆಯ ಸುಮಾರು 1,817 ಸಿಬ್ಬಂದಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ನಿಗಾ ಇಟ್ಟಿರುವ ಕಮಲ್ ಪಂತ್ ಅವರು, ಠಾಣೆಗಳ ಆಡಳಿತ ಮಾರ್ಪಾಡು ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟು ವರ್ಗಾವಣೆ ಮಾಡಿದ್ದಾರೆ.
ಒಟ್ಟು, 127 ಪಿಎಸ್ಸೈ, 130 ಎಎಸ್ಸೈ, 999 ಸಿಎಚ್ಸಿ, 561 ಸಿಪಿಸಿ ಸೇರಿ ಒಟ್ಟು 1817 ಸಿಬ್ಬಂದಿಯ ವರ್ಗಾವಣೆ ಮಾಡಿ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
Next Story