ಶಿವಮೊಗ್ಗ: ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ; ರಾಷ್ಟ್ರ ಮಟ್ಟದ ಖೋ-ಖೋ ಆಟಗಾರ ಮೃತ್ಯು
ನವೀನ್
ಶಿವಮೊಗ್ಗ,ಆ.31: ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿರುವ ಘಟನೆ ನಡೆದಿದ್ದು, ಶಿವಮೊಗ್ಗದ ಖ್ಯಾತ ಖೋ ಖೋ ಆಟಗಾರ ನವೀನ್ (29) ಸಾವನ್ನಪ್ಪಿದ್ದಾರೆ.
ನಗರದ ದ್ರೌಪದಮ್ಮ ವೃತ್ತದ ಬಳಿ ತಡರಾತ್ರಿ ಅಪಘಾತ ಘಟನೆ ನಡೆದಿದ್ದು. ಸಿಸಿ ಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಶಿವಮೊಗ್ಗದ ಆಶೋಕ ನಗರದ ನಿವಾಸಿಯಾಗಿದ್ದ ನವೀನ್ 10 ಕ್ಕೂ ಹೆಚ್ಚು ಬಾರಿ ರಾಷ್ಟ್ರ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಇನ್ನೋರ್ವ ಬೈಕ್ ಸವಾರ ನವೀನ್ ( 32) ಗೂ ಸಹ ತೀವ್ರ ಗಾಯಗಳಾಗಿದ್ದು, ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story