ಸಿಇಟಿ ಫಲಿತಾಂಶ ಪ್ರಕಟ: ಮೈಸೂರಿನ ಮೇಘನ್ ಎಚ್.ಕೆ ಪ್ರಥಮ
ಬೆಂಗಳೂರು : 2020-2021ನೆ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಸೋಮವಾರ ಪ್ರಕಟವಾಗಿದೆ.
ಆಗಸ್ಟ್ 28, 29 ಮತ್ತು 30ರಂದು ಸಿಇಟಿ ಪರೀಕ್ಷೆ ನಡೆದಿತ್ತು. ಇಂದು ಮಧ್ಯಾಹ್ನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟ ಮಾಡಲಾಯಿತು.
'ಮೈಸೂರು ಪ್ರಮತಿ ಹಿಲ್ ವೀವ್ ಅಕಾಡೆಮಿ' ಕಾಲೇಜಿನ ವಿದ್ಯಾರ್ಥಿನಿ ಮೇಘನ್ ಎಚ್.ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಂಜೆ 4 ಗಂಟೆಯ ನಂತರ ಈ https://cetonline.karnataka.gov.in/kea/ ಲಿಂಕ್ನಲ್ಲಿ ಪ್ರಕಟವಾಗಲಿದೆ ಎಂದು ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ kea.kar.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು. 2,01,834 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಇಂಜಿನಿಯರಿಂಗ್, ಯೋಗ, ನ್ಯಾಚುರೋಪತಿ, ಬಿ-ಫಾರ್ಮಾ, ಡಿ-ಫಾರ್ಮಾ, ವೆಟರ್ನರಿ ಮತ್ತ ಫಾರ್ಮ್ ಸೈನ್ಸ್ ಸೇರಿದಂತೆ ಇತರೆ ಕೋರ್ಸ್ಗಳಿಗೆ ಪರೀಕ್ಷೆ ನಡೆದಿತ್ತು.