ಹಿಂದೂಯಿಸಂ, ಹಿಂದುತ್ವದ ಬಗ್ಗೆ ನಟಿ ರಮ್ಯಾ ಹೇಳಿದ್ದು ಹೀಗೆ...
ನಟಿ ರಮ್ಯಾ
ಬೆಂಗಳೂರು: ರಾಜ್ಯ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ನಟಿ ರಮ್ಯಾ, ಇದೀಗ ಹಿಂದೂಯಿಸಂ ಮತ್ತು ಹಿಂದುತ್ವದ ಕುರಿತು ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ‘ಹಿಂದೂ ಧರ್ಮ ಹಾಗೂ ಹಿಂದುತ್ವ ಒಂದೇ ವಿಚಾರವಲ್ಲ. ಆದರೆ, ಹಿಂದುತ್ವ ಎನ್ನುವುದು ರಾಜಕೀಯ, ಹಿಂದೂ ಧರ್ಮ ಎನ್ನುವುದು ರಾಜಕೀಯವಲ್ಲ. ಹಿಂದೂ ಧರ್ಮ ಎಂದರೆ ಅದು ಎಲ್ಲರನ್ನೊಳಗೊಂಡದ್ದಾಗಿದೆ ಹಾಗೂ ಎಲ್ಲರನ್ನೂ ಪ್ರೀತಿಸುವುದಾಗಿದೆ. ಹಿಂದುತ್ವ ಅನ್ನುವುದು ಇದಕ್ಕೆ ವಿರುದ್ಧವಾಗಿದ್ದು, ನಿಜವಾದ ಹಿಂದೂಗಳಿಗೆ ಈ ವ್ಯತ್ಯಾಸ ತಿಳಿದಿದೆ’ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
Next Story