ಶಿವಮೊಗ್ಗ: ನಕಲಿ ನೋಟು ಚಲಾವಣೆ; ಇಬ್ಬರ ಬಂಧನ
ಶಿವಮೊಗ್ಗ,26: ಭದ್ರಾವತಿಯ ರಂಗಪ್ಪ ಸರ್ಕಲ್ ಹತ್ತಿರ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಶುಕ್ರವಾರ ಬಂಧಿಸಲಾಗಿದೆ.
ತರೀಕೆರೆಯ ಅರುಣ್ ಕುಮಾರ್ (23), ಹರಿಗೆಯ ಪ್ರೇಮ್ ರಾಜ್ (23) ಅವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 500 ರೂ. ಮುಖಬೆಲೆಯ 182 ನಕಲಿ ನೋಟುಗಳನ್ನು ಮತ್ತು ನಕಲಿ ನೋಟು ತಯಾರಿಸಲು ಬಳಸಿದ ಪ್ರಿಂಟರ್ ವಶಕ್ಕೆ ಪಡೆಯಲಾಗಿದೆ. ಭದ್ರಾವತಿಯ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story