ಮೊಟ್ಟೆಗಳು ಸಸ್ಯಾಹಾರಿಯೂ ಅಲ್ಲ, ಮಾಂಸಾಹಾರಿಯೂ ಅಲ್ಲ: ಚೇತನ್ ಅಹಿಂಸಾ ತಿರುಗೇಟು
ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ವಿಚಾರ
ಬೆಂಗಳೂರು: ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ವಿರೋಧಿಸುವವರಿಗೆ ತಿರುಗೇಟು ನಿಡಿರುವ ನಟ ಚೇತನ್ ಅಹಿಂಸಾ 'ಮೊಟ್ಟೆಗಳು ಸಸ್ಯಾಹಾರಿಯೂ ಅಲ್ಲ, ಮಾಂಸಾಹಾರಿಯೂ ಅಲ್ಲ' ಎಂದು ಹೇಳಿದ್ದಾರೆ.
ಚೇತನ್ ಅಹಿಂಸಾ ಅವರ ಟ್ವೀಟ್ ಇಂತಿವೆ:
ಮೊಟ್ಟೆಗಳು ಸಸ್ಯಾಹಾರಿಯೂ ಅಲ್ಲ ಅಥವಾ ಮಾಂಸಾಹಾರಿ ಅಲ್ಲ (ಫಲವತ್ತಾಗದ) ಮೊಟ್ಟೆಗ ಅವು ಕೋಳಿಗಳಿಂದ ಬರುತ್ತವೆ ಎಂಬ ಕಾರಣಕ್ಕೆ ಅದನ್ನು ನಿಷೇಧಿಸಿದರೆ, ಹಸುಗಳಿಂದ ಬರುವ ಎಲ್ಲಾ ಡೈರಿಗಳನ್ನು ನಿಷೇಧಿಸಬೇಕು. ಹಾಲು, ಬೆಣ್ಣೆ , ಮೊಸರು ಇವೆಲ್ಲವನ್ನೂ ನಿಷೇಧಿಸಬೇಕು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧಾರ್ಮಿಕ ಲಾಬಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
To repeat, eggs are neither veg nor non-veg
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) December 15, 2021
If (unfertilised) eggs are banned cuz they come from chickens, milk/butter/curd/all dairy that come from cows must also be banned@BSBommai must stop cowering to puritanical religious lobbies & start caring about our children’s health