ಮಂಡ್ಯ: ಮಗನ ಸಾವಿನ ಸುದ್ದಿ ತಿಳಿದು ಕುಸಿದು ಬಿದ್ದು ಮೃತಪಟ್ಟ ತಾಯಿ
ನಾಗಮಂಗಲ, ಜ.24: ಹೃದಯಾಘಾತದಿಂದ ಪುತ್ರ ಸಾವನ್ನಪ್ಪಿದ ವಿಷಯ ಕೇಳಿ ತಾಯಿಯೂ ಕುಸಿದು ಸಾವನ್ನಪ್ಪಿರುವ ಮನಕಲಕುವ ಘಟನೆ ತಾಲೂಕಿನ ಗಿಡುವಿನ ಹೊಸಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಹೊಣಕೆರೆ ಹೋಬಳಿ ಗಿಡುವಿನ ಹೊಸಹಳ್ಳಿಕೊಪ್ಪಲು ಗ್ರಾಮದ ಕುಶಾಲ್(45) ಹಾಗು ತಾಯಿ ಲಕ್ಷ್ಮಮ್ಮ (70) ಎಂಬುವರು ಸಾವನ್ನಪ್ಪಿರುವ ತಾಯಿ ಮಗ ಎಂದು ತಿಳಿದು ಬಂದಿದೆ.
ರವಿವಾರ ಸಂಜೆ ಮಗ ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ವಿಷಯ ಕೇಳಿದ ತಾಯಿಯೂ ಆಘಾತದಿಂದ ಕುಸಿದು ಮಗನ ಬಳಿಯೇ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ ತಾಯಿ ಮಗನ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು ಎಂದು ತಿಳಿದು ಬಂದಿದೆ.
Next Story