Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಂವಿಧಾನ ಬದಲಿಸಬೇಕು ಎಂದ ತೆಲಂಗಾಣ ಸಿಎಂ...

ಸಂವಿಧಾನ ಬದಲಿಸಬೇಕು ಎಂದ ತೆಲಂಗಾಣ ಸಿಎಂ ವಿರುದ್ಧ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಆಕ್ರೋಶ

ವಾರ್ತಾಭಾರತಿವಾರ್ತಾಭಾರತಿ3 Feb 2022 9:31 PM IST
share
ಸಂವಿಧಾನ ಬದಲಿಸಬೇಕು ಎಂದ ತೆಲಂಗಾಣ ಸಿಎಂ ವಿರುದ್ಧ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಆಕ್ರೋಶ

ಮೈಸೂರು,ಫೆ.3: ಭಾರತದ ಸಂವಿಧಾನದ ರಚನಾ ಸ್ವರೂಪ ಮತ್ತು ಅದರ ಉದ್ದೇಶದ ಬಗೆಗೆ ಸರಿಯಾದ ಜ್ಞಾನ ಹೊಂದಿಲ್ಲದ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಕೇವಲ ತನ್ನ ಸುತ್ತ ವ್ಯಕ್ತಿ ಕೇಂದ್ರಿತವಾದ ಚರ್ಚೆಯೊಂದು ನಡೆಯಲಿ ಎಂಬ ಕಾರಣಕ್ಕೆ ಸಂವಿಧಾನವನ್ನು ಬದಲಿಸುವ ಮಾತನ್ನು ಆಡಿರುವುದು ಅವರ ಬೇಜವಾಬ್ದಾರಿ ತನದ ಸಂಕೇತ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಟ್ವೀಟ್ ಇಂತಿವೆ...

ಈತನ ಪ್ರಕಾರ ಸಮವರ್ತಿ ಪಟ್ಟಿಯಲ್ಲಿರುವ ಅಂಶಗಳ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾಳ ಮೇಳ ಇಲ್ಲದೇ ಇರುವುದರಿಂದ ಸಂವಿಧಾನವನ್ನು ಬದಲಿಸಬೇಕಂತೆ.

ಸರ್ಕಾರಗಳ ನಡುವೆ ತಾಳ ಮೇಳ ಇಲ್ಲದೇ ಹೋಗುವುದು ಸರ್ಕಾರಗಳ ಲೋಪವೋ ಇಲ್ಲ ಸಂವಿಧಾನದ ಲೋಪವೋ? ನಿಮ್ಮ ದುರ್ಬಲತೆಗೆ ಸಂವಿಧಾನವೇಕೆ ಜವಾಬ್ದಾರಿ ಹೊರಬೇಕು?

50 ವರ್ಷಗಳ ರಾಜಕೀಯ ನೋಡಿದ್ದರಿಂದಾಗಿಯೇ ಸಂವಿಧಾನವನ್ನು ಹೊಸದಾಗಿ ಬರೆಯಬೇಕು ಎಂದು ತೆಲಂಗಾಣ ಮುಖ್ಯಮಂತ್ರಿಗಳಿಗೆ ಅನ್ನಿಸಿದೆಯಂತೆ. ಸಂವಿಧಾನವನ್ನೇ ಅರ್ಥ ಮಾಡಿಕೊಳ್ಳದೇ ಈತ 50 ವರ್ಷ ರಾಜಕೀಯ ಹೇಗೆ ಮಾಡಿರಬಹುದು ಎಂದು ನೆನೆದರೆ ನನಗೆ ಆತಂಕವಾಗುತ್ತದೆ ಎಂದಿದ್ದಾರೆ.

ಭಾರತದ ಸಂವಿಧಾನವು ಜಗತ್ತಿನಲ್ಲೇ ಅತಿದೊಡ್ಡ ಸಂವಿಧಾನ ಎಂದು ಹೆಸರು ಪಡೆದಿದೆ. ಅತಿದೊಡ್ಡ ಸಂವಿಧಾನ ಎಂದು ಕರೆಸಿಕೊಳ್ಳುವ ಸಲುವಾಗಿಯೇ ಸಂವಿಧಾನದೊಳಗೆ ಪುಟಗಳನ್ನು ತುಂಬಿಸಿಲ್ಲ.

ಬದಲಿಗೆ ವಿಸ್ತಾರ ಭೂ ಪ್ರದೇಶ ಹೊಂದಿ, ಕೆಲವೇ ಕಿಲೋಮೀಟರ್ ಗಳ ಅಂತರಕ್ಕೆ ಒಂದು ಭಾಷೆ, ಸಂಸ್ಕೃತಿ ಮತ್ತು ವಿಭಿನ್ನ ಆಚರಣೆಯ ಜೊತೆಗೆ, ಹತ್ತಾರು ಧರ್ಮ, ನೂರಾರು ಜಾತಿಗಳನ್ನು ಹೊಂದಿರುವ ವೈವಿಧ್ಯಮಯ ದೇಶವಾಗಿರುವ ಕಾರಣಕ್ಕೆ, ಅವರೆಲ್ಲರ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸಂವಿಧಾನವು ದೊಡ್ಡದಾಗಿ ರೂಪುಗೊಂಡಿದೆ.

ಕೇವಲ ಹಕ್ಕಿನ ಪ್ರಜ್ಞೆ ಮಾತ್ರವಲ್ಲದೇ ಕರ್ತವ್ಯದ ಪ್ರಜ್ಞೆಯನ್ನೂ ಸಾರುವ ನಮ್ಮ ಸಂವಿಧಾನದಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ವಿಂಗಡಣೆಯಾದ ರಾಜ್ಯಗಳ ಜನರನ್ನು ರಕ್ಷಿಸುವ ಆಡಳಿತ ಸೂತ್ರಗಳನ್ನು ವಿಸ್ತಾರವಾಗಿ ನೀಡಲಾಗಿದೆ.

ಸಂವಿಧಾನದಲ್ಲಿ ಇಷ್ಟೊಂದು ಅವಕಾಶ ಇರುವುದರಿಂದಲೇ ಚಂದ್ರಶೇಖರ ರಾವ್ ಅವರ ಪ್ರತ್ಯೇಕ ರಾಜ್ಯ ಬೇಕೆಂಬ ಬೇಡಿಕೆಗೆ ಮನ್ನಣೆ ದೊರೆತಿದೆ.

ಇಷ್ಟೇ ಅಲ್ಲದೇ ಸಂವಿಧಾನದಲ್ಲಿ ಇರುವ ಅಂಶಗಳು ಬಹುತೇಕ ಎಲ್ಲಾ ಭಾರತೀಯರ ಭಾವನೆ, ಆಚರಣೆ, ಆಡಳಿತ, ರಕ್ಷಣೆ ಮತ್ತು ಎಲ್ಲರೂ ಸಹಯೋಗದೊಂದಿಗೆ ಆರೋಗ್ಯಪೂರ್ಣವಾಗಿ ಬದುಕಬೇಕೆಂಬ ತಳಹದಿಯ ಮೇಲೆ ರಚಿತವಾಗಿದೆ.

ಸಂವಿಧಾನ ಎಂಬುದು ಸಿಹಿನೀರಿನ ಸಮುದ್ರ ಇದ್ದಂತೆ, ಅಲ್ಲಿ ಜೀವ ರಾಶಿಗಳು ಬದುಕಲು ಬೇಕಾದ ಎಲ್ಲ ಅವಕಾಶಗಳನ್ನೂ ಸೃಷ್ಟಿಸಲಾಗಿದೆ. ಇಂತಹ ಸಮುದ್ರದ ಸಹಾಯದಿಂದ ಎಲ್ಲರನ್ನೂ ಬದುಕಿಸಬೇಕಾದ ಜವಾಬ್ದಾರಿ ಹೊತ್ತಿರುವ ಕೆಸಿಆರ್ ಅಂತಹ ಜನ ಪ್ರತಿನಿಧಿಗಳು ಅಂತಹ ಸಮುದ್ರವನ್ನೇ ಬದಲಿಸಬೇಕು ಎನ್ನುವುದು ಮೂರ್ಖತನದ ಸಂಕೇತವಾಗಿದೆ.

ಬಾಬಾ ಸಾಹೇಬರು " ನನ್ನ ಸಂವಿಧಾನ ಉತ್ತಮವಾಗಿದ್ದರೂ ಸಹ ಅದು ಕೆಟ್ಟ ಜನರ ಕೈಗೆ ಸಿಕ್ಕರೆ, ಅದರ ಉದ್ದೇಶ ಫಲಿಸುವುದಿಲ್ಲ" ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ನೋಡಿದಾಗ ಚಂದ್ರಶೇಖರ್ ರಾವ್ ಅವರು ಮೊದಲು ಸಂವಿಧಾನವನ್ನು ಅರ್ಥಮಾಡಿಕೊಂಡು ಮಾತನಾಡುವುದನ್ನು ಕಲಿಯಬೇಕು ಎಂದು ತಿರುಗೇಟು ನೀಡಿದ್ದಾರೆ.

ಸಂವಿಧಾನವೇ ಅರ್ಥವಾಗದೇ ಸಂವಿಧಾನವನ್ನು ಬದಲಿಸುತ್ತೇವೆ ಎಂಬುದು ಮೊದಲನೇ ಮೂರ್ಖತನವಾದರೆ, ಸಂವಿಧಾನವನ್ನು ಹೊಸದಾಗಿ ಬರೆದ ಮೇಲೆ ಎಲ್ಲವೂ ಎಲ್ಲರೂ ಸರಿಯಾಗಿ ನಡೆಯುತ್ತಾರೆ ಎಂಬುದು ಇನ್ನೊಂದು ಮೂರ್ಖತನ.

ಹೀಗಾಗಿ ಕೇವಲ ಒಣ ಪ್ರಚಾರಕ್ಕಾಗಿ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಅತಿ ಬುದ್ಧಿವಂತಿಕೆ ತೋರದೇ, ಮೊದಲು ಸಂವಿಧಾನವನ್ನು  ತಿಳಿದುಕೊಳ್ಳಲಿ ಮತ್ತು ಸಂವಿಧಾನವನ್ನೇ ಅರಿಯದೇ 50 ವರ್ಷ ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಈಗ ಸಂವಿಧಾನವನ್ನು ಬದಲಿಸಬೇಕು ಎಂದು ಬೇಜವಾಬ್ದಾರಿಯಿಂದ ಮಾತನಾಡಿದ್ದಕ್ಕೆ ದೇಶದ ಜನರ ಕ್ಷಮೆಯಾಚಿಸಲಿ ಎಂದು ಈ ಮೂಲಕ ಆಗ್ರಹಿಸಿದ್ದಾರೆ.

ಸಂವಿಧಾನ ಎಂಬುದು ಸಿಹಿನೀರಿನ ಸಮುದ್ರ ಇದ್ದಂತೆ, ಅಲ್ಲಿ ಜೀವ ರಾಶಿಗಳು ಬದುಕಲು ಬೇಕಾದ ಎಲ್ಲ ಅವಕಾಶಗಳನ್ನೂ ಸೃಷ್ಟಿಸಲಾಗಿದೆ. ಇಂತಹ ಸಮುದ್ರದ ಸಹಾಯದಿಂದ ಎಲ್ಲರನ್ನೂ ಬದುಕಿಸಬೇಕಾದ ಜವಾಬ್ದಾರಿ ಹೊತ್ತಿರುವ ಕೆಸಿಆರ್ ಅಂತಹ ಜನ ಪ್ರತಿನಿಧಿಗಳು ಅಂತಹ ಸಮುದ್ರವನ್ನೇ ಬದಲಿಸಬೇಕು ಎನ್ನುವುದು ಮೂರ್ಖತನದ ಸಂಕೇತವಾಗಿದೆ.

4/5

— Dr H.C.Mahadevappa (@CMahadevappa) February 3, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X