ಹಳೆ ಟ್ವೀಟ್‍ಗಳಿಂದ ವಿವಾದ: ಟ್ವಿಟ್ಟರ್ ಖಾತೆಯನ್ನೇ ಹೊಂದಿರಲಿಲ್ಲ ಎಂದು ವರಸೆ ಬದಲಿಸಿದ ಜೆಎನ್‍ಯು ನೂತನ ಉಪಕುಲಪತಿ
-

Photo: Jnu.ac.in
ಹೊಸದಿಲ್ಲಿ: ರಾಜಧಾನಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ನೂತನವಾಗಿ ನೇಮಕಗೊಂಡ ಉಪಕುಲಪತಿ ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರದ್ದೆಂದು ಹೇಳಲಾದ ಹಳೆಯ ಟ್ವೀಟ್‍ಗಳಿಗೆ ಸಂಬಂಧಿಸಿದಂತೆ ವಿವಾದಕ್ಕೀಡಾಗಿದ್ದಾರೆ. ರೈತರನ್ನು ಜಿಹಾದಿಗಳೆಂದು ಸಂಬೋಧಿಸಿರುವುದು, ಹತ್ಯಾಕಾಂಡಕ್ಕೆ ಕರೆ ನೀಡಿದವರನ್ನು ಬೆಂಬಲಿಸಿ ಈ ಹಿಂದೆ ಅವರು ಮಾಡಿದ್ದಾರೆನ್ನಲಾದ ಟ್ವೀಟ್‍ಗಳು ವಿವಾದಕ್ಕೀಡಾಗುತ್ತಿದ್ದಂತೆಯೇ ತಾವು ಟ್ವಿಟ್ಟರ್ ಖಾತೆಯನ್ನೇ ಹೊಂದಿರಲಿಲ್ಲ ಎಂದು ಆಕೆ ಸಬೂಬು ನೀಡಿದ್ದಾರೆ.
@SantishreeD ಎಂಬ ಟ್ವಿಟ್ಟರ್ ಖಾತೆ ಇತ್ತೀಚಿಗಿನವರೆಗೂ ಅಸ್ತಿತ್ವದಲ್ಲಿದ್ದರೂ ಆಕೆಯನ್ನು ಉಪಕುಲಪತಿಯನ್ನಾಗಿ ನೇಮಕಗೊಳಿಸಲಾಗಿದೆ ಎಂಬ ಬೆನ್ನಿಗೇ ವಿವಾದ ಹುಟ್ಟಿಕೊಂಡಾಕ್ಷಣ ಡಿಲೀಟ್ ಮಾಡಲಾಗಿತ್ತು.
ಈ ಟ್ವಿಟ್ಟರ್ ಖಾತೆಯು ಜೆಎನ್‍ಯುವಿನ ಒಳಗಿನವರ ಕೆಲಸ ಹಾಗೂ ತಾವು ಇಲ್ಲಿನ ಪ್ರಥಮ ಮಹಿಳಾ ಉಪಕುಲಪತಿಯಾಗಿರುವುದು ಇಷ್ಟವಿಲ್ಲದ ಯಾರೋ ಮಾಡಿದ ಕೆಲಸ ಎಂದು ಆಕೆ ಹೇಳಿದ್ದಾರೆ. ಆದರೆ ವಿವಾದಿತ ಟ್ವೀಟ್‍ಗಳು ಸುದ್ದಿಯಾಗುತ್ತಿದ್ದಂತೆಯೇ ಟ್ವಿಟ್ಟರ್ ಖಾತೆ ಏಕೆ ಡಿಲೀಟ್ ಆಯಿತೆಂಬುದಕ್ಕೆ ಸ್ಪಷ್ಟೀಕರಣ ದೊರೆತಿಲ್ಲ.
ಯಾವತ್ತೂ ಟ್ವಿಟ್ಟರ್ ಖಾತೆ ಹೊಂದಿಲ್ಲ ಎಂದಿರುವ ಶಾಂತಿಶ್ರೀ ಅದೇ ಸಮಯ ಅದನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿರುವುದೂ ಸಂಶಯಕ್ಕೆ ಕಾರಣವಾಗಿದೆ.
ಆಕೆಯ ಟ್ವಿಟ್ಟರ್ ಖಾತೆಯಿಂದ ಈ ಹಿಂದೆ ಪೋಸ್ಟ್ ಮಾಡಲಾಗಿದ್ದ ಆಕೆಯ ಕುಟುಂಬ ಸದಸ್ಯರ ಕುರಿತಾದ ಫೋಟೋಗಳನ್ನೂ ಪೋಸ್ಟ್ ಮಾಡಿದ ಕೆಲವರು ಇಂತಹ ಫೋಟೋಗಳು ಹ್ಯಾಕ್ ಮಾಡಿದವರಿಗೆ ಹೇಗೆ ಸಿಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಆಕೆಯದ್ದೆಂದು ಹೇಳಲಾದ ಟ್ವಿಟ್ಟರ್ ಖಾತೆಯ ಹಲವು ಪೋಸ್ಟ್‍ಗಳು ಬಲಪಂಥೀಯರ ಶೈಲಿಯ ಪೋಸ್ಟ್ ಗಳಾಗಿದ್ದವಲ್ಲದೆ ಜೆಎನ್‍ಯುವಿನ ಎಡಪಂಥೀಯ ಹೋರಾಟಗಾರರನ್ನು ನಕ್ಸಲ್ ಜಿಹಾದಿಗಳು, ಗಾಂಧೀಜಿಯ ಹತ್ಯೆ ಏಕೀಕೃತ ಭಾರತ ಹೊಂದಲು ಇದ್ದ ಪರಿಹಾರವಾಗಿತ್ತೆಂಬ ಚಿಂತನೆಯಿಂದ ನಾಥೂರಾಂ ಗೋಡ್ಸೆ ಹತ್ಯೆಗೈದಿದ್ದ ಎಂಬ ಹೇಳಿಕೆ ಮುಂತಾದವು ವಿವಾದಕ್ಕೀಡಾಗಿವೆ.
ಹಿಂದುಳಿದ ವರ್ಗದ ತಮಿಳುನಾಡಿನ ಮಹಿಳೆ ತಾವಾಗಿರುವುದರಿಂದ ಹಾಗೂ ಎಡಪಂಥೀಯರ ಹಿಡಿತದಲ್ಲಿದ್ದ ಒಂದು ಹುದ್ದೆಯನ್ನು ತಮಗೆ ನೀಡಲಾಗಿರುವುದನ್ನು ಸಹಿಸದವರಿಂದ ಈ ಕೆಲಸ ನಡೆದಿದೆ ಎಂದು ನೂತನ ಉಪಕುಲಪತಿ ಆರೋಪಿಸಿದ್ದಾರೆ.
Someone hacked into her family albums too https://t.co/8Vnklye09O pic.twitter.com/JhQV0VMnGy
— Amritkaalvin Klein (@bigdeekenergyy) February 9, 2022
Santishree Pandit now claims she never had a twitter account, or it was hacked, one wonders who then tweeted this very personal picture from the same acc. Curious #JNUVC pic.twitter.com/lGvfltFWcd
— Gargi Rawat (@GargiRawat) February 9, 2022
Professor Santishree Dhulipudi Pandit, the new VC of JNU.
— Darab Farooqui दाराब फारूक़ी داراب فاروقی (@darab_farooqui) February 7, 2022
And her Immense Love with the Word "Jihadi".
Best of Luck, JNU. pic.twitter.com/tLzJmU8UIk
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.