ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್' ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ: ಮಾಜಿ ಸಚಿವ ಎಂ.ಬಿ ಪಾಟೀಲ್ ಒತ್ತಾಯ
photo- twitter
ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿದ ಚಿತ್ರ 'ಜೇಮ್ಸ್' ಗುರುವಾರ ತೆರೆ ಕಾಣಲಿದ್ದು, ಇದೀಗ ಸಿನೆಮಾಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಇತ್ತೇಚೆಗೆ 'ದಿ ಕಾಶ್ಮೀರ್ ಫೈಲ್ಸ್' ಹಿಂದಿ ಸಿನೆಮಾಗೆ ತೆರಿಗೆ ವಿನಾಯಿತಿ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ ಬೆನ್ನಲ್ಲೇ ಇದೀಗ 'ಜೇಮ್ಸ್' ಚಿತ್ರಕ್ಕೂ ತೆರಿಗೆ ವಿನಾಯಿತಿ ನೀಡುವಂತೆ ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವರು ಒತ್ತಾಯಸಿದ್ದು, ಈ ಸಂಬಂಧ ಮಾಜಿ ಸಚಿವ ಎಂ.ಬಿ ಪಾಟೀಲ್ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
''ನಮ್ಮೆಲ್ಲರ ಪ್ರೀತಿಯ ಅಪ್ಪು, ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ' ಜೇಮ್ಸ್' (James) ಸಿನೆಮಾ ಇದೇ ಮಾರ್ಚ್ 17ರಂದು ಬಿಡುಗಡೆಯಾಗುತ್ತಿದೆ. ಅಂದು ಪುನೀತ್ ಅವರ ಜನ್ಮದಿನ ಕೂಡ. ಈ ಚಿತ್ರವನ್ನು ನೋಡಲು ರಾಜ್ಯವೇ ಕಾತುರದಿಂದ ಕಾಯುತ್ತಿದೆ. ಈ ಚಿತ್ರಕ್ಕೆ ತೆರಿಗೆಮುಕ್ತ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಒತ್ತಾಯ ಮಾಡುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮೆಲ್ಲರ ಪ್ರೀತಿಯ ಅಪ್ಪು, Dr #PuneethRajkumar ಅಭಿನಯದ #James ಸಿನಿಮಾ ಇದೇ ಮಾರ್ಚ್ 17ರಂದು ಬಿಡುಗಡೆಯಾಗುತ್ತಿದೆ. ಅಂದು ಪುನೀತ್ ಅವರ ಜನ್ಮದಿನ ಕೂಡ. ಈ ಚಿತ್ರವನ್ನು ನೋಡಲು ರಾಜ್ಯವೇ ಕಾತುರದಿಂದ ಕಾಯುತ್ತಿದೆ. ಈ ಚಿತ್ರಕ್ಕೆ #TaxFree (ತೆರಿಗೆಮುಕ್ತ) ಮಾಡಬೇಕೆಂದು ಮಾನ್ಯ @CMofKarnataka ಅವರಲ್ಲಿ ಒತ್ತಾಯ ಮಾಡುತ್ತೇನೆ. pic.twitter.com/8hFlkYZjo4
— M B Patil (@MBPatil) March 16, 2022