ಕಲಬುರಗಿ: ಚಾಕುವಿನಿಂದ ಇರಿದು ಯುವಕನ ಕೊಲೆ
ಕಲಬುರಗಿ, ಎ.1: ಚಾಕುವಿನಿಂದ ಇರಿದು ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಎಂಎಸ್ಕೆ ಮಿಲ್ ನ ಮೌಲಾ ಅಲಿ ಕಟ್ಟೆಯ ಹತ್ತಿರ ಗುರುವಾರ ರಾತ್ರಿ ನಡೆದಿದೆ.
ಮುಹಮ್ಮದ್ ಸುಹೈಲ್ (21) ಕೊಲೆಯಾದ ಯುವಕ. ಇವರು ಬೆನ್ನು ಮತ್ತು ಎದೆಗೆ ಚಾಕುವಿನಿಂದ ಇರಿಯಲಾಗಿದೆ. ಬೆನ್ನಿಗೆ ಚುಚ್ಚಿದ ಸ್ಥಿತಿಯಲ್ಲೇ ಚಾಕುವನ್ನು ತೊರೆದು ಹಂತಕರು ಪರಾರಿಯಾಗಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story