‘ಸಂಘಟನೆಗಳ ಪರವಾಗಿ ನಾವು ಇದ್ದೇವೆ': ಜಟ್ಕಾ ವಿವಾದವನ್ನು ಸಮರ್ಥಿಸಿದ ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಂಘಪರಿವಾರದ ಕಾರ್ಯಕರ್ತರು ಹಿಂದೂಯೇತರರ ಮಾಂಸ ಮಾರಾಟ ವಿಚಾರದಲ್ಲಿ ವಿವಾದ ಸೃಷ್ಟಿಸಿರುವ ಬಗ್ಗೆ ರಾಜ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾಗಿರುವ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದು, 'ಹಿಂದೂ ಸಂಘಟನೆಗಳ ಪರವಾಗಿ ನಾವು ಇದ್ದೇವೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಸಂಬಂದ ಶನಿವಾರ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವೆ, “ಈ ಸಂಘಟನೆಗಳು ಮಾಡುತ್ತಿರುವ ರೀತಿಯಲ್ಲಿ ಜಟ್ಕಾ ಕಟ್ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಅಗತ್ಯವಿದೆ. ಯಾಕೆಂದರೆ ಅದು ಬೇರೆ ದೇವರಿಗೆ ಅರ್ಪಿಸುವುದರಿಂದ ಸಮಸ್ಯೆ ಉದ್ಭವಿಸುತ್ತದೆ. ಈ ಸಂಘಟನೆಗಳ ಪರವಾಗಿ ನಾವು ಇದ್ದೇವೆ” ಎಂದು ಹೇಳಿದ್ದಾರೆ.
#Karnataka Muzrai Minister Shashikala Jolle backs campaign of #Bajrangdal against #Halal meat.*I feel what our pro #hindu organs are doing-it is right.There needs to be awareness about jhatka cut everywhere.Issue arises since it is offered to other god.We are behind backing them* pic.twitter.com/Dt6TifSfxW
— Imran Khan (@KeypadGuerilla) April 2, 2022