ಕೊಳ್ಳೇಗಾಲ: ಟ್ರಯಲ್ ನೋಡುವ ನೆಪದಲ್ಲಿ ಬೈಕ್ ಸಮೇತ ಪರಾರಿಯಾದ ಆರೋಪಿಯ ಬಂಧನ
ಕಾರ್ತಿಕ್ - ಬಂಧಿತ ಆರೋಪಿ
ಕೊಳ್ಳೇಗಾಲ. ಮೇ.22. ಬೈಕ್ ಖರೀದಿ ಮಾಡುವುದಾಗಿ ಹೇಳಿ ಕಳ್ಳತನ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಕಾರ್ತಿಕ್ (23) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಬೈಕ್ ಖರೀದಿ ಮಾಡುವುದಾಗಿ ಹೇಳಿ ಆರೋಪಿಯು ಮೇ.13ರಂದು ಕೆಂಪಯ್ಯನಹಟ್ಟಿ ಅನಿಲ್ ನಿಂದ ಪಲ್ಸರ್ ಬೈಕ್ ತೆಗೆದುಕೊಂಡು ಟ್ರಯಲ್ ನೋಡಿಕೊಂಡು ಬರುವುದಾಗಿ ಹೇಳಿ ಹೋದವನು ಬೈಕ್ ಸಮೇತ ಪರಾರಿಯಾಗಿದ್ದಾನೆ. ಬೈಕ್ ಮಾಲಕ ಅನಿಲ್ ಅನೇಕ ಬಾರಿ ಪೋನ್ ಕರೆ ಮಾಡಿದ್ದರು ಬೈಕ್ ತೆಗೆದುಕೊಂಡು ಹೋದ ಕಾರ್ತಿಕ್ ವಾಪಸ್ಸು ಆಗದ ಕಾರಣ ಅನಿಲ್ ಪಟ್ಟಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೈಗೆತ್ತಿಕೊಂಡು ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Next Story