Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಇದು ಸಮಾಜ ಸುಧಾರಕನೊಬ್ಬನ ವಿರುದ್ಧ...

ಇದು ಸಮಾಜ ಸುಧಾರಕನೊಬ್ಬನ ವಿರುದ್ಧ ಮೂಲಭೂತವಾದಿಗಳ ಸ್ಪಷ್ಟ ದ್ವೇಷ ಸಾಧನೆ: ಪಠ್ಯಪುಸ್ತಕ ಸಮಿತಿ ವಿರುದ್ಧ ಕವಿರಾಜ್ ಕಿಡಿ

''ವಿದ್ವಾಂಸರು ಇರಬೇಕಾದ ಜಾಗದಲ್ಲೆಲ್ಲಾ ವಿದ್ವಂಸಕರು ಕಾಣಿಸುತ್ತಿದ್ದಾರೆ''

ವಾರ್ತಾಭಾರತಿವಾರ್ತಾಭಾರತಿ22 May 2022 9:41 PM IST
share
ಇದು ಸಮಾಜ ಸುಧಾರಕನೊಬ್ಬನ ವಿರುದ್ಧ ಮೂಲಭೂತವಾದಿಗಳ ಸ್ಪಷ್ಟ ದ್ವೇಷ ಸಾಧನೆ: ಪಠ್ಯಪುಸ್ತಕ ಸಮಿತಿ ವಿರುದ್ಧ ಕವಿರಾಜ್ ಕಿಡಿ

ಬೆಂಗಳೂರು: ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ 'ಕೇಸರೀಕರಣʼವನ್ನು ಮಾಡಲಾಗಿದೆ ಹಾಗೂ ನಾರಾಯಣ ಗುರು ಅವರ ಪಠ್ಯಗಳನ್ನು ಕೈ ಬಿಟ್ಟಿದ್ದಾರೆ ಎಂಬ ಆರೋಪ ಸದ್ಯ ಕೇಳಿ ಬಂದಿದ್ದು, ಈ ಸಂಬಂಧ ಗೀತರಚನೆಕಾರ, ನಿರ್ದೇಶಕ ಕವಿರಾಜ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇನ್ನು ಬಿಜೆಪಿ ಸರ್ಕಾರವು ಶಿಕ್ಷಣವನ್ನು ಕೇಸರೀಕರಣ ಮಾಡುವ ಮೂಲಕ ಶಾಲಾ ಮಕ್ಕಳ ತಲೆಗೆ ಹಿಂದುತ್ವದ ಅಜೆಂಡಾವನ್ನು ತುರುಕುತ್ತಿದೆ. ವೈವಿಧ್ಯತೆಯನ್ನು ನಾಶಮಾಡಿ ಕೇವಲ ಬ್ರಾಹ್ಮಣ ಲೇಖಕರನ್ನು ವೈಭವೀಕರಿಸಿ ಅವರ ಲೇಖನಗಳನ್ನೇ ಪಠ್ಯವನ್ನಾಗಿ ರೂಪಿಸಿದೆ. ಸಮಿತಿಯಲ್ಲಿ ಬಹುಪಾಲು ಬ್ರಾಹ್ಮಣ ಸಮುದಾಯದವರೇ ಇದ್ದು, ಪಠ್ಯದಲ್ಲೂ ಬ್ರಾಹ್ಮಣ್ಯವನ್ನು ವಿಜೃಂಭಿಸುವ ಅಂಶಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿ ಈಗಾಗಲೇ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ #RejectRSSTextBooks #RejectBrahminTextBooks ಹ್ಯಾಷ್‌ಟ್ಯಾಗ್‌ ಗಳು ಟ್ರೆಂಡ್‌ ಆಗಿದೆ. 

ಕವಿರಾಜ್ ಅವರು ಫೇಸ್ ಬುಕ್ ನಲ್ಲಿ ಬರೆದಿರುವುದೇನು?;  ಸಾರಾಂಶ ಇಲ್ಲಿದೆ...

ಈ ವರ್ಷದ ಆರಂಭದಲ್ಲಿ ಗಣರಾಜ್ಯೋತ್ಸವ ಪರೇಡಿಗೆ ಕೇರಳ‌ ಸರ್ಕಾರ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕಳಿಸಿದಾಗ ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿ ಅದರ ಬದಲಿಗೆ ಶಂಕರರಾಚಾರ್ಯರ ಚಿತ್ರ ಕಳಿಸುವಂತೆ ಸೂಚಿಸಿತ್ತು . ಇದೀಗ ಕರ್ನಾಟಕ ಸರ್ಕಾರ ನೇಮಿಸಿದ ಸಮಿತಿ ಹತ್ತನೆ ತರಗತಿಯ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ಅವರ ಬಗೆಗಿನ ಪಠ್ಯವನ್ನು ತೆಗೆದು ಕಟ್ಟು ಕಥೆ , ಸುಳ್ಳಿನ ಪುಂಗಿಗಳನ್ನೇ ಪ್ರವಚನವಾಗೀ ನೀಡೀ ಜನರ ದಾರಿ ತಪ್ಪಿಸಿದವರಿಗೆ ಮಣೆ ಹಾಕಿದೆ. ನಾರಾಯಣ ಗುರು ಅವರ ಬಗೆಗಿನ ಪಾಠದಲ್ಲೇ ಇದ್ದ ಆರ್ಯ ಸಮಾಜ , ಬ್ರಹ್ಮ ಸಮಾಜ, ವಿವೇಕಾನಂದರ ವಿಚಾರಗಳನ್ನು ಉಳಿಸಿಕೊಂಡು ನಾರಾಯಣ ಗುರುಗಳ ವಿಚಾರಕ್ಕೆ ಮಾತ್ರ ಕತ್ತರಿ ಹಾಕಲಾಗಿದೆ. ಪ್ರತಿರೋಧ ಹೆಚ್ಚಾದ ನಂತರ ಅದನ್ನು ಏಳನೇ ತರಗತಿ ಪಠ್ಯಕ್ಕೆ ವರ್ಗಾಯಿಸಲಾಗಿದೆ ಎನ್ನುವುದೆಲ್ಲ ಮುಖ ಉಳಿಸಿಕೊಳ್ಳುವ ಸಮಜಾಯಿಷಿ.

ಇದಕ್ಕೆಲ್ಲ ಹಿನ್ನೆಲೆ ಏನು , ಕಾರಣವೇನು ಎಂದು ನೋಡಿದರೆ ಇದು ಮೇಲು ಕೀಳು ,ಅಸ್ಪ್ರಶ್ಯತೆ ಮುಂತಾದ ಅನಿಷ್ಟಗಳ ವಿರುದ್ದ ಹೋರಾಡಿದ ಅಪ್ರತಿಮ ಸಮಾಜ ಸುಧಾರಕನೊಬ್ಬನ ವಿರುದ್ಧ ಮೂಲಭೂತವಾದಿಗಳ ಸ್ಪಷ್ಟ ದ್ವೇಷ ಸಾಧನೆಯಷ್ಟೇ.

ಹತ್ತೊಂಬತ್ತನೆ ಶತಮಾನದ ಕೊನೆ ಮತ್ತು ಇಪ್ಪತ್ತನೆ ಶತಮಾನದ ಆರಂಭದಲ್ಲಿ ನಾರಾಯಣ ಗುರು ಕೇರಳದಲ್ಲಿ ಸಮಾನತೆಗಾಗಿ ಸಾಮಾಜಿಕ ಕ್ರಾಂತಿಯನ್ನೇ ನಡೆಸಿದರು. ಅವರ ಪ್ರಭಾವ ಕರ್ನಾಟಕದ ಕರಾವಳಿಗು ವ್ಯಾಪಿಸಿತ್ತು. ದೇವಾಲಯಗಳಿಗೆ ಕೆಳ ಜಾತಿಯವರಿಗೆ ಪ್ರವೇಶ ನಿರಾಕರಿಸಲಾಗುತ್ತಿದ್ದ ಕಾಲದಲ್ಲಿ ನಾರಾಯಣ ಗುರು ಅಂತಹಾ ಕೆಳ ಜಾತಿಯವರಿಗಾಗೇ ದೇವಾಲಯಗಳನ್ನು ಆರಂಭಿಸಿದರು. ಮಂಗಳೂರಿನ ಕುದ್ರೋಳಿ ದೇವಾಲಯವು ಅವರ ಸ್ಥಾಪನೆಯೇ. ಮೂಲಭೂತವಾದಿಗಳು , ಮೇಲ್ಜಾತಿಯವರು ಇದನ್ನು ವಿರೋಧಿಸಿದಾಗ "ಇದು ನಿಮ್ಮ ಶಿವ ಅಲ್ಲ ,ಇದು ನಮ್ಮ ಶಿವ ,ಈಳವ ಶಿವ " ಎಂದು ದಿಟ್ಟವಾಗಿ ಉತ್ತರಿಸಿದರು‌.

ಈಳವ ಎಂದರೆ ಆ ಕಾಲಕ್ಕೆ ಮರದಿಂದ ಸೇಂದಿ ಇಳಿಸುವುದನ್ನೆ ಕುಲಕಸುಬು ಆಗಿಸಿಕೊಂಡ ಜನಾಂಗವೊಂದರ ಹೆಸರು. ಕರ್ನಾಟಕದಲ್ಲಿ ಇವರನ್ನೇ ಬಿಲ್ಲವ, ಈಡಿಗ ಎಂಬ ಹೆಸರಿಂದ ಗುರುತಿಸುತ್ತಾರೆ.

ನಾರಾಯಣ ಗುರುಗಳು ಯಾವುದೇ ಜಾತಿಗೆ ಸೀಮಿತರಾಗಿರದೆ ಎಲ್ಲಾಶೋಷಿತ ಜನರ ಪರ ನಿಂತವರು. ಮನುಷ್ಯತ್ವವೇ ಧರ್ಮ ಎಂದು ಸಾರಿದರು. ದುಶ್ಚಟಗಳಿಂದ ದೂರಾಗಿ , ಒಳ್ಳೆಯ ಶಿಕ್ಷಣ ಪಡೆದು ಉತ್ತಮ ನಾಗರೀಕರಾಗಿ ಎಂದು ಸಮಾಜವನ್ನು ಪ್ರೇರೇಪಿಸಿದ ಮಹಾನ್ ಚೇತನ ಅವರು. ಸ್ವತಹ ಗಾಂಧೀಜಿ ,ರವೀಂದ್ರನಾಥ್ ಠಾಗೋರ್ ಅವರಂತಹ ಮಹನೀಯರೆ ಇವರಿಂದ ಪ್ರೇರೇಪಿತರಾಗಾದ್ದರು.

ನಾರಾಯಣ ಗುರು ಅಷ್ಟೇ ಅಲ್ಲ ಸಮಾಜ ಸುಧಾರಣೆ ,ಅಸ್ಪ್ರಶ್ಯತೆ ,ಮೇಲು ಕೀಳು ತಾರತಮ್ಯದ ವಿರುದ್ಧ ಹೋರಾಡಿದ ಬುದ್ಧ , ಬಸವಣ್ಣ, ಅಂಬೇಡ್ಕರ್ , ಪೆರಿಯಾರ್, ಅಂತಹಾ ಮಹನೀಯರ ಮೇಲೆಲ್ಲ ಇವರಿಗೆ ಇನ್ನಿಲ್ಲದ ದ್ವೇಷವಿದೆ . ದುರಂತವೆಂದರೆ ಇವತ್ತು ಈ ಮಹನೀಯರ ಅನುಯಾಯಿಗಳು ಎಂದು ಹೇಳುವ ಬಹುತೇಕ ಜನರು ಇದೇ ಮೂಲಭೂತವಾದಿಗಳ ಶಾಲು , ಧ್ವಜ ಹಿಡಿದು ಉನ್ಮಾದಕ್ಕೊಳಗಾಗಿದ್ದಾರೆ.

ಎಲ್ಲದ್ದಕ್ಕೂ ದೇಶಭಕ್ತಿಯ ಗುರಾಣಿ ಹಿಡಿಯುವ ಜನ ಬ್ರಿಟೀಷರಿಗೆ ಬಗ್ಗದೆ ನೇಣಿಗೆ ತಲೆಯೊಡ್ಡಿದ ಭಗತ್ ಸಿಂಗ್ ಪಾಠ ತೆಗೆದು‌, ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸದೆ , ಬ್ರಿಟೀಷರ ಪರವಾಗಿದ್ದ ಸಂಘಟನೆಯ ಸಂಸ್ಥಾಪಕರ ಭಾಷಣವನ್ನು ಪಠ್ಯದಲ್ಲಿ ಸೇರಿಸಿ ಅದಾವ ಬಗೆಯ ದೇಶಪ್ರೇಮವನ್ನು ಮಕ್ಕಳಲ್ಲಿ ಬೆಳೆಸಲು ಹೊರಟಿದ್ದಾರೋ ಗೊತ್ತಿಲ್ಲ. ಎಲ್ಲಕ್ಕಿಂತ ಕಳವಳಕಾರಿ ಸಂಗತಿ ಎಂದರೆ ತಮ್ಮ ಗುಪ್ತ ಅಜೆಂಡಾಗಳ ಕಾರ್ಯಸಾಧನೆಗೆ ಇವರು ನೇರವಾಗಿ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಾಲೆಯ ಅಂಗಳಕ್ಕೆ ಕಾಲಿಟ್ಟಿರುವುದು , ಮಕ್ಕಳು ಕಲಿಯಬೇಕಾದ ಪಠ್ಯಪುಸ್ತಕಗಳಿಗೆ ಕೈ ಹಾಕಿರುವುದು‌. ವಿದ್ವಾಂಸರು ಇರಬೇಕಾದ ಜಾಗದಲ್ಲೆಲ್ಲಾ ವಿದ್ವಂಸಕರು ಕಾಣಿಸುತ್ತಿದ್ದಾರೆ. ಒಟ್ಟಾರೆ ಸಮಾಜದಲ್ಲಿ ದ್ವೇಷದ ವಿಷ ಹರಡುತ್ತಾ ದುರಂತವೊಂದರ ಕಡೆ ದಾಪುಗಾಲು ಹಾಕಿಸಲಾಗುತ್ತಿದೆ ಎಂದು ಕವಿರಾಜ್ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X