ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಜೈರಾಮ್ ರಮೇಶ್ ಆಯ್ಕೆ
ಜೈರಾಮ್ ರಮೇಶ್ (PTI)
ಬೆಂಗಳೂರು, ಮೇ 29: ಜೂನ್ 10ಕ್ಕೆ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಜೈರಾಮ್ ರಮೇಶ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.
ನಾಳೆ( ಮೇ 30) ಜೈರಾಮ್ ರಮೇಶ್ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಪಕ್ಷದ ಎಲ್ಲ ಶಾಸಕರಿಗೂ ಆಹ್ವಾನ ನೀಡಲಾಗಿದೆ.
ಕಳೆದ ಬಾರಿಯೂ ಜೈರಾಮ್ ರಮೇಶ್ ಅವರಿಗೆ ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಅವಕಾಶ ಕಲ್ಪಿಸಿದ್ದು ಮತ್ತೊಂದು ಅವಧಿಗೆ ಅವರನ್ನೇ ಆಯ್ಕೆ ಮಾಡಲು ವರಿಷ್ಟರು ನಿರ್ಧರಿಸಿದ್ದಾರೆ.
Next Story