ಹಿಜಾಬ್ ಶಿಕ್ಷಣಕ್ಕೆ ಅಡ್ಡಿಯಲ್ಲ: ಪಿಯು ಪರೀಕ್ಷೆ ಟಾಪರ್ ಮಂಗಳೂರಿನ ಇಲ್ಹಾಮ್ ಗೆ ಪ್ರಶಂಸೆಯ ಮಹಾಪೂರ
-

ಬೆಂಗಳೂರು: ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯು ಪರೀಕ್ಷೆ ಟಾಪರ್ ಮಂಗಳೂರಿನ ಇಲ್ಹಾಮ್ ಗೆ ಸಾಮಾಜಿಕ ತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಇಲ್ಹಾಮ್ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ 597 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ಹಿಂದೆ ರಾಜ್ಯದ ಹಲವು ಕಾಲೇಜುಗಳಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ವಿವಾದ ಏರ್ಪಟ್ಟು ಬಳಿಕ ಹಿಜಾಬ್ ಧರಿಸುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿತ್ತು. ಅಲ್ಲದೇ ಹಿಜಾಬ್ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿತ್ತು. ಬಳಿಕ ಹಲವಾರು ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ವಿದ್ಯಾರ್ಜನೆಗೈದು ಮಹತ್ವದ ಸಾಧನೆಗಳನ್ನು ಮಾಡಿದ್ದರು.
ಇದೀಗ ಎಸೆಸೆಲ್ಸಿ ಬಳಿಕ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲೂ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಸಾಧನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರಶಂಸಿಸಿದ್ದಾರೆ.
'ಹಿಜಾಬ್ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ. ಪಿಯುಸಿಯಲ್ಲಿ ರಾಜ್ಯಕ್ಕೆ 2 ನೇ ಸ್ಥಾನ ಗಳಿಸಿದ್ದಕ್ಕಾಗಿ ಇಲ್ಹಾಮ್ ಅವರಿಗೆ ಅಭಿನಂದನೆಗಳು' ಎಂದು ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದ ಶಾಸಕಿ ಕನೀಝ್ ಫಾತಿಮಾ ಟ್ವೀಟ್ ಮಾಡಿದ್ದಾರೆ.
'ಹಿಜಾಬ್ ಮತ್ತು ಶಿಕ್ಷಣದ ನಡುವೆ ಆಯ್ಕೆ ಮಾಡಿಕೊಳ್ಳಬೇಕೆಂದ ಸರಕಾರ ಮತ್ತು ಅದರ ಬೆಂಬಲಿಗರಿಗೆ ಇಲ್ಹಾಮ್ ಕಪಾಳಮೋಕ್ಷ ಮಾಡಿದ್ದಾರೆ. ನಾವು ನಮ್ಮ ತಲೆಯನ್ನು ಮುಚ್ಚುತ್ತೇವೆ ಹೊರತು ಮೆದುಳನ್ನಲ್ಲ' ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
'ಹಿಜಾಬ್ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ. ನಿಮ್ಮ ತಲೆಯ ಮೇಲಿರುವುದಕ್ಕಿಂತ ನಿಮ್ಮ ತಲೆಯ ಒಳಗಿರುವ ವಿಚಾರ ಮುಖ್ಯ. ಪಿಯುಸಿ ಪರೀಕ್ಷೆಯಲ್ಲಿ 2ನೇ ಸ್ಥಾನ ಗಳಿಸಿದ್ದಕ್ಕಾಗಿ ಇಲ್ಹಾಮ್ ಅವರಿಗೆ ಅಭಿನಂದನೆಗಳು. ಆಕೆಯ ಯಶಸ್ಸಿನ ಬಳಿಕವಾದರೂ ರಾಜ್ಯ ಸರ್ಕಾರ ತನ್ನ ಮುಸ್ಲಿಂ ಹೆಣ್ಣು ಮಕ್ಕಳ ವಿರೋಧಿ ನೀತಿಯನ್ನು ಪರಿಶೀಲಿಸಬಹುದು ಎಂದು ಆಶಿಸುತ್ತೇವೆ ಎಂದು ಇನ್ನೊಬ್ಬರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಹಲವರು ಇಲ್ಹಾಂಗೆ ಅಭಿನಂದನೆ ಸಲ್ಲಿಸಿದ್ದಾರೆ.
Ilham, a Hijabi student, stood second in Karnataka by securing 597 marks in 12th class exams!
— Muslim Spaces (@MuslimSpaces) June 19, 2022
Her success is a tight slap to those elite/woke Muslims & atheist "Muslims" who played a role in stereotyping Hijab!pic.twitter.com/0wdLW6fI00
Hijab is not a barrier for education.
— Kaneez Fatima (@MlaKaneezfatima) June 18, 2022
Congratulations to Ilham for securing 2nd rank in Karnataka state PUC examination. pic.twitter.com/o4crCLFxtv
Where are those idiots who preached about hijab being a symbol of oppression. Listen to this girl, who topped her exam in the same state that banned hijab. It's a slap to those Islamophobic propaganda.
— Aasif Mujtaba (@MujtabaAasif) June 19, 2022
Look at her confidence & smile, Mashaallah#hijab #hijabigirl #Karnataka pic.twitter.com/xdrBX7TtX5
Ilham, who is second science stream topper in the state, securing 597 marks said that her aim is to become a psychologist. She is the student of St Aloysius PU College. Daughter of Mahammad Raffic Davood Saheb, a computer programmer and Moizatul Kubra, homemaker from Kudroli. pic.twitter.com/hQWcOFvF18
— Kevin Mendonsa (@KevinMTOI) June 18, 2022
#Mangalore ; Miss ILHAM (Science) & Miss Anisha Mallya (Com) of St Aloysius PU College, Kodialbail, #Mangaluru Bag 2nd Ranks respectively in the State in II #PUCResults Examinations- and both stand with FIRST Ranks in#dakshinakannada #congratulations #Karnataka #hijabigirl pic.twitter.com/CaBxNCc4nT
— Hate Watch Karnataka. (@Hatewatchkarnat) June 18, 2022
And the regressive govt and it’s supporters tell choose between hijab and education. Ilham is slapping them all. “We cover our head, not brain” https://t.co/a4hotDeoZK
— Juveriya Afreen جویریہ آفرینಜುವೇರಿಯ (@HussainiJaweria) June 19, 2022
#Ilham a #Hijab Wearing Science Student from St Aloysius College Mangaluru Scored 597/600 marks in Class 12th holding the 2nd Rank in the state.#PUCResults #Mangalore #Karnataka pic.twitter.com/VKiVsc2rwU
— Public Karnataka (@Public_Karntka) June 19, 2022
Hijab is not a barrier to Education. Whats inside your head matters more than whats above your Head..
— Deccan Digest (@DeccanDigest) June 19, 2022
Congratulations to Ilham for securing 2nd rank in Karnataka state PUC examination. Hopefully the Karnataka Govt will review its Anti-Muslim Girls policy after her success.. pic.twitter.com/GWsgeQe8bT
Hijab is not a barrier for education.
— My country my pride (@sultan_bharat) June 19, 2022
Congratulations to Ilham for securing 2nd rank in Karnataka state PUC examination.@ikseshwarappa shame on you. #Karanataka pic.twitter.com/tivZP6BAxu
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.