ನಾಳೆಯಿಂದ (ಜು.6) ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪ್ರತಿಕೆಗಳ ಸ್ಕ್ಯಾನ್ಡ್ ಪ್ರತಿಗಳು ಪ್ರಕಟ
ಸ್ಕ್ಯಾನ್ಡ್ ಪ್ರತಿ ಪಡೆಯುವ ವಿಧಾನ ಇಲ್ಲಿದೆ...
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.5: ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಗಳನ್ನು ನಾಳೆಯಿಂದ (ಜು.6) ವೆಬ್ಸೈಟ್ನಲ್ಲಿ ಪ್ರಕಟಿಸಿ, ವಿದ್ಯಾರ್ಥಿಗಳಿಗೆ ಎಸ್ಎಮ್ಎಸ್ ಕಳುಹಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.
ಜು.18ರಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಜು.30ರೊಳಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಗಳನ್ನು ಪಡೆಯಲು ಆನ್ಲೈನ್ ಅರ್ಜಿಗೆ ಅವಕಾಶ ನೀಡಲಾಗಿತ್ತು. ಅರ್ಜಿಸಲ್ಲಿಸಿದವರ ಉತ್ತರ ಪ್ರತಿಗಳನ್ನು ಇಲಾಖೆಯ ವೆಬ್ಸೈಟ್ https//pue.karnataka.gov.in ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.
ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಪಡೆಯುವ ವಿಧಾನ
ಇಲಾಖೆಯ ವೆಬ್ಸೈಟ್ www.pue.karnataka.gov.in ಭೇಟಿ ನೀಡಿ.
ಓಪನ್ ಆದ ಮುಖಪುಟದಲ್ಲಿ Answer Sheet Scanned Copy ಎಂದು ಇರುತ್ತದೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ದ್ವಿತೀಯ ಪಿಯುಸಿ ಪರೀಕ್ಷೆಯ ನೋಂದಣಿ ಸಂಖ್ಯೆ ನಮೂದಿಸಿ.
ನೀವು ಯಾವ ವಿಷಯದ ಸ್ಕ್ಯಾನ್ಡ್ ಪ್ರತಿ ಪಡೆಯಬೇಕು ಆ ವಿಷಯದ ಮೇಲೆ ಕ್ಲಿಕ್ ಮಾಡಿ.
ಆಗ ನಿಮಗೆ ನಿಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿ ದೊರೆಯುತ್ತದೆ.
ನಂತರ ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.