ಮಡಿಕೇರಿ: ಎರಡು ಕಾಡಾನೆಗಳು ಸಾವು
ಮಡಿಕೇರಿ ಆ.3 : ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ಬಿಬಿಟಿಸಿ ಕಾಫಿ ತೋಟದಲ್ಲಿ ಬುಧವಾರ ಹೆಣ್ಣಾನೆಯ (60) ಮೃತದೇಹ ಪತ್ತೆಯಾಗಿದೆ.
ಇದು ವಯೋಸಹಜ ಸಾವೆಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮರಿಯಾನೆ ಸಾವು
ಆರು ತಿಂಗಳ ಮರಿಯಾನೆಯೊಂದು ಮಾಲ್ದಾರೆ ಅರಣ್ಯದಂಚಿನಲ್ಲಿ ಮೃತಪಟ್ಟಿದೆ. ಕೆರೆಯಲ್ಲಿ ನೀರು ಕುಡಿಯಲೆಂದು ಬಂದಿದ್ದ ಆನೆಗಳ ಹಿಂಡಿನೊಂದಿಗಿದ್ದ ಮರಿಯಾನೆ ಸಾವನ್ನಪ್ಪಿದೆ. ಇತರ ಆನೆಗಳ ಮಧ್ಯೆ ಸಿಲುಕಿಕೊಂಡು ಕಾಲು ಮುರಿತಕ್ಕೊಳಗಾಗಿ ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story